ಹೇರಳ ಪೋಷಕಾಂಶ ಹೊಂದಿರುವ ‘ವಿಟಮಿನ್’ ಸೊಪ್ಪಿನ ಪಲ್ಯ

ವಿಟಮಿನ್ ಸೊಪ್ಪು ಹೆಸರೇ ಸೂಚಿಸುವಂತೆ ಹೇರಳ ಪೋಷಕಾಂಶಗಳನ್ನು ಹೊಂದಿದೆ.

ಇದನ್ನು ಚಕ್ರಮುನಿ ಅಂತಲೂ ಕರೆಯುತ್ತಾರೆ. ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿರುವ ಈ ಸೊಪ್ಪಿನ ಎಲೆ, ಚಿಗುರು, ಕಾಂಡವನ್ನು ಅಡುಗೆಯಲ್ಲಿ ಬಳಸಲಾಗುತ್ತದೆ. ರೊಟ್ಟಿಗೆ, ಚಪಾತಿಗೆ ಹೊಂದುವ ವಿಟಮಿನ್ ಸೊಪ್ಪಿನ ಪಲ್ಯ ಹೇಗೆ ಮಾಡುವುದು ಅಂತ ತಿಳಿಯೋಣ.

ಬೇಕಾಗುವ ಸಾಮಾಗ್ರಿಗಳು

ವಿಟಮಿನ್ ಸೊಪ್ಪು – 4 ಮುಷ್ಟಿ
ಬಟಾಟೆ – 1 ಸಣ್ಣಗೆ ಹೆಚ್ಚಿದ್ದು
ಈರುಳ್ಳಿ – 1
ಕಾಯಿ ತುರಿ – 1/4 ಕಪ್
ಹಸಿಮೆಣಸು – 3
ಅರಿಶಿಣ ಪುಡಿ – 1/4 ಚಮಚ
ಖಾರ ಪುಡಿ – 1/4 ಚಮಚ
ಬೆಲ್ಲ – 1 ಚಮಚ
ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ

ಎಣ್ಣೆ ಸ್ವಲ್ಪ
ಉದ್ದಿನಬೇಳೆ – 1 ಚಮಚ
ಸಾಸಿವೆ – 1 ಚಮಚ

ಮಾಡುವ ವಿಧಾನ

ವಿಟಮಿನ್ ಸೊಪ್ಪನ್ನು ಸ್ವಚ್ಛಗೊಳಿಸಿ ಹೆಚ್ಚಿಟ್ಟುಕೊಳ್ಳಬೇಕು. ಹಾಗೇ ಈರುಳ್ಳಿಯನ್ನು ಹೆಚ್ಚಿಟ್ಟುಕೊಳ್ಳಬೇಕು.

ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಉದ್ದಿನಬೇಳೆ, ಸಾಸಿವೆ, ಹಸಿಮೆಣಸು, ಈರುಳ್ಳಿ ಹಾಕಿ ಬಾಡಿಸಿಕೊಳ್ಳಬೇಕು.

ಬಳಿಕ ವಿಟಮಿನ್ ಸೊಪ್ಪು, ಅರಿಶಿಣ ಪುಡಿ, ಉಪ್ಪು, ಹೆಚ್ಚಿದ ಬಟಾಟೆ, ಬೆಲ್ಲ ಹಾಕಿ ನೀರು ಚುಮುಕಿಸಿ ಬೇಯಲು ಬಿಡಿ. ಬೆಂದ ಮೇಲೆ ಕಾಯಿತುರಿ ಹಾಕಿ ಕೈಯಾಡಿಸಿ. ಈಗ ವಿಟಮಿನ್ ಸೊಪ್ಪಿನ ಪಲ್ಯ ರೆಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read