ವಯಸ್ಸಾದ ತಂದೆಗೆ ಮಗ ʻಜೀವನಾಂಶʼ ನೀಡಬೇಕು : ಕೋರ್ಟ್ ಮಹತ್ವದ ಆದೇಶ

ಮಕ್ಕಳು ದೊಡ್ಡವರಾಗ್ತಿದ್ದಂತೆ ತಂದೆ – ತಾಯಿಯನ್ನು ದೂರ ಮಾಡ್ತಾರೆ. ಅನೇಕ ಪಾಲಕರು ಅನಾಥಾಶ್ರಮ ಸೇರಿದ್ರೆ ಮತ್ತೆ ಕೆಲ ಪಾಲಕರು ವೃದ್ಧಾಪ್ಯದಲ್ಲೂ ಕಷ್ಟಪಟ್ಟು ದುಡಿದು ಜೀವನ ನಡೆಸುತ್ತಿದ್ದಾರೆ. ಮಕ್ಕಳಿಂದ ಬಿಡಿಗಾಸು ಅವರಿಗೆ ಸಿಗ್ತಿಲ್ಲ. ಇಂಥ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಜಾರ್ಖಂಡ್ ಹೈಕೋರ್ಟ್‌ನ ನ್ಯಾಯಮೂರ್ತಿ ಸುಭಾಷ್ ಚಂದ್, ಕಿರಿಯ ಮಗ ತಂದೆಗೆ  3,000 ರೂಪಾಯಿ ಜೀವನಾಂಶ ನೀಡಬೇಕು ಎಂದು ಆದೇಶ ನೀಡಿದ್ದಾರೆ.

ವಯಸ್ಸಾದ ತಂದೆಯನ್ನು ಕಾಪಾಡುವುದು ಮಗನ ಪವಿತ್ರ ಕರ್ತವ್ಯ. ಪೋಷಕರು ಬೀಜಗಳಾದ್ರೆ ಮಕ್ಕಳು ಸಸ್ಯ. ಹೆತ್ತವರಿಂದ ನೀವು ಒಳ್ಳೆಯದು ಮತ್ತು ಕೆಟ್ಟದ್ದನ್ನು ಆನುವಂಶಿಕವಾಗಿ ಪಡೆಯುತ್ತೀರಿ. ಹುಟ್ಟಿದಾಗಿನಿಂದ ನೀವು ಅಪ್ಪ – ಅಮ್ಮನ ಋಣವನ್ನು ಸಾಲವಾಗಿ ಹೊಂದಿರುತ್ತೀರಿ. ಅದನ್ನು ಮರುಪಾವತಿಸಬೇಕು ಎಂದು ಕೋರ್ಟ್‌ ಹೇಳಿದೆ.

ಮನೋಜ್‌ ಸಾವ್‌ ಪ್ರಕರಣ ಕೋರ್ಟ್‌ ನಲ್ಲಿದೆ. ಅವರಿಗೆ ಸ್ವಲ್ಪ ಜಮೀನ್‌ ಇದೆ. ಮನೋಜ್‌ ಸಾವ್‌ ತನ್ನ ದೊಡ್ಡ ಮಗನ ಜೊತೆ ವಾಸವಾಗಿದ್ದಾರೆ. ಆದರೆ ತಮ್ಮ ಆಸ್ತಿಯನ್ನು ಇಬ್ಬರು ಮಕ್ಕಳಿಗೆ ಸಮನಾಗಿ ಹಂಚಿದ್ದಾರೆ. ಕಿರಿಯ ಮಗ ಮಾತ್ರ ತಂದೆಯ ಆಸ್ತಿ ಪಡೆದಿದ್ದರೂ ತಂದೆಗೆ ಸಹಾಯ ಮಾಡ್ತಿಲ್ಲ. ಹದಿನೈದು ವರ್ಷಗಳಿಂದ ತಂದೆಗೆ ಸಹಾಯ ಮಾಡಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್‌ ಈಗ ಈ ತೀರ್ಪು ನೀಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read