ಗಮನಿಸಿ : 1000 ‘ಗ್ರಾಮ ಆಡಳಿತ ಅಧಿಕಾರಿ’ ಹುದ್ದೆಗಳ ಅರ್ಜಿ ಶುಲ್ಕ ಪಾವತಿಸಲು ಇಂದು ಕೊನೆಯ ದಿನ.!

ಕರ್ನಾಟಕ ರಾಜ್ಯದ ಕಂದಾಯ ಇಲಾಖೆಯು 1000 ಗ್ರಾಮ ಲೆಕ್ಕಾಧಿಕಾರಿ (ಗ್ರಾಮ ಆಡಳಿತ ಅಧಿಕಾರಿ) ಹುದ್ದೆಗಳಿಗೆ ನೇಮಕಾತಿ ಮಾಡಲು ಪ್ರಕಟಣೆ ಹೊರಡಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೇ.18 ಕೊನೆಯ ದಿನಾಂಕವಾಗಿತ್ತು. ಆದರೆ ಶುಲ್ಕ ಪಾವತಿಸಲು ಮೇ.22 ರವರೆಗೆ ಅವಕಾಶ ನೀಡಲಾಗಿತ್ತು. (ಮೇ.22) ಇಂದು ಶುಲ್ಕ ಪಾವತಿಗೆ ಕೊನೆಯ ದಿನಾಂಕವಾಗಿದೆ.

ಹುದ್ದೆಯ ವಿವರ:
• ಹುದ್ದೆಯ ಹೆಸರು: ಗ್ರಾಮ ಲೆಕ್ಕಾಧಿಕಾರಿ / ಗ್ರಾಮ ಆಡಳಿತ ಅಧಿಕಾರಿ
• ಸಂಸ್ಥೆ: ಕರ್ನಾಟಕ ರಾಜ್ಯ ಸರ್ಕಾರ, ಕಂದಾಯ ಇಲಾಖೆ
• ಒಟ್ಟು ಹುದ್ದೆಗಳು: 1000
• ವೇತನ ಶ್ರೇಣಿ: ₹ 21,400 – ₹ 42,000
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಮೊದಲು 04-05-2024 ಎಂದು ನಿಗದಿಪಡಿಸಲಾಗಿತ್ತು. ಆದರೆ ಈಗ ಅದನ್ನು 22-05-2024 ರ ವರೆಗೆ ವಿಸ್ತರಿಸಲಾಗಿದೆ.
• ಅರ್ಹತೆ: PUC ಪಾಸಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು.
• ವೇತನ: ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 21,400 ರೂ. ರಿಂದ 42,000 ರೂ. ವರೆಗೆ ವೇತನ ನೀಡಲಾಗುತ್ತದೆ.

• ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಅರ್ಹತೆಗಳು

ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ PUC ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಕನ್ನಡ ಭಾಷೆಯಲ್ಲಿ ಓದುವುದು, ಬರೆಯುವುದು ಮತ್ತು ಮಾತನಾಡುವುದರಲ್ಲಿ ಪರಿಣತಿ ಹೊಂದಿರಬೇಕು.
ಗಣಿತ ಮತ್ತು ಲೆಕ್ಕಾಚಾರದಲ್ಲಿ ಉತ್ತಮ ಜ್ಞಾನ ಹೊಂದಿರಬೇಕು.

ಕಂಪ್ಯೂಟರ್ ಜ್ಞಾನ ಅಗತ್ಯ.
ಅರ್ಜಿ ಶುಲ್ಕ:
• ಸಾಮಾನ್ಯ ಅಭ್ಯರ್ಥಿಗಳು: ₹ 500
• SC/ST/PWD ಅಭ್ಯರ್ಥಿಗಳು: ₹ 250

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read