ಬೆಂಗಳೂರಿಗರೇ ಗಮನಿಸಿ : ‘ಕಾವೇರಿ’ ನೀರಿನ ಹೊಸ ಸಂಪರ್ಕ ಪಡೆಯಲು ಜಸ್ಟ್ ಹೀಗೆ ಅರ್ಜಿ ಸಲ್ಲಿಸಿ..!

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳ ನಿವಾಸಿಗಳು ಕಾವೇರಿ ನೀರಿನ ಹೊಸ ಸಂಪರ್ಕವನ್ನು ಪಡೆಯಲು ಜಲಮಂಡಳಿಯ ಜಾಲತಾಣದ ಮೂಲಕ ಅಥವಾ ಮಂಡಳಿಯ ಸಮೀಪದ ವಲಯ ಕಚೇರಿಯಲ್ಲಿ ಆಫ್ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು.

ಹೊಸ ಸಂಪರ್ಕಕ್ಕಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಸ್ಕ್ಯಾನ್ ಮಾಡಿ ಅಥವಾ https://owc.bwssb.gov.in/consumer ಭೇಟಿ ನೀಡಬಹುದಾಗಿದೆ.

ಹೇಗೆ ಅರ್ಜಿ ಸಲ್ಲಿಸುವುದು..?

ಮನೆಯ ಮಾಲೀಕರು ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಆಗಿ
* ಇ – ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆ ನಮೂದಿಸಿ
* ಶುಲ್ಕ ಪಾವತಿಸಿ ಅರ್ಜಿ ಪಡೆಯಿರಿ
• ಅಗತ್ಯ ವಿವರಗಳೊಂದಿಗೆ ಭರ್ತಿ ಮಾಡಿ, ಪೂರಕ ದಾಖಲೆಗಳನ್ನು ಅಪ್ಲೋಡ್ ಮಾಡಿ
* ಕಟ್ಟಡದ ನಕ್ಷೆ / ಅನುಮೋದನೆಗೊಂಡಿರುವ ನಕ್ಷೆ, ಮಾಲೀಕರೊಂದಿಗಿರುವ ಕಟ್ಟಡದ ಛಾಯಾಚಿತ್ರ 1,200 ಚದರ ಅಡಿ ಮತ್ತು ಮೇಲ್ಪಟ್ಟ ವಿಸ್ತೀರ್ಣದ ಮನೆ ಆಗಿದ್ದಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿರುವುದಕ್ಕೆ ದಾಖಲೆಗಳನ್ನು ಲಗತ್ತಿಸುವುದು

ಸೂಚನೆ: ಮೊಬೈಲ್ ಫೋನ್ ಸಂಖ್ಯೆಯೊಂದಿಗೆ ಲಾಗಿನ್ ಆಗಿ ಅರ್ಜಿ ಯಾವ ಹಂತದಲ್ಲಿದೆ ಎಂದು ತಿಳಿಯಬಹುದು.

https://twitter.com/KarnatakaVarthe/status/1847649298088923450

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read