ಗಮನಿಸಿ : ‘KPSC’ ಯಿಂದ ಇಲಾಖಾ ಪರೀಕ್ಷೆಯ ‘ಉತ್ತೀರ್ಣತಾ ಪ್ರಮಾಣ ಪತ್ರ’ಬಿಡುಗಡೆ, ಹೀಗೆ ಡೌನ್ ಲೋಡ್ ಮಾಡ್ಕೊಳ್ಳಿ

ಕರ್ನಾಟಕ ಲೋಕಸೇವಾ ಆಯೋಗದ ಇಲಾಖಾ ಪರೀಕ್ಷೆಯ ‘ಉತ್ತೀರ್ಣತಾ ಪ್ರಮಾಣ ಪತ್ರ’ ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದು.

ಈ ಕುರಿತು ಉಪ ಕಾರ್ಯದರ್ಶಿ, ಇಲಾಖಾ ಪರೀಕ್ಷಾ ಶಾಖೆ, ಕರ್ನಾಟಕ ಲೋಕಸೇವಾ ಆಯೋಗ ಇವರು ಅಧಿಸೂಚನೆ ಹೊರಡಿಸಿದ್ದು, 2021 ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ (ವಿಷಯ ಸಂಕೇತ-47ಮತ್ತು 73 ಹೊರತುಪಡಿಸಿ) ಅಭ್ಯರ್ಥಿಗಳು ಉತ್ತೀರ್ಣತಾ ಪ್ರಮಾಣ ಪತ್ರಗಳನ್ನು ಆಯೋಗದ “http://kpsc.kar.nic.in” “Departmental Examination 2021 II session”, ಲಿಂಕ್ ಮುಖಾಂತರ ಡಿಜಿಲಾಕರ್ ಆಕೌಂಟ್ನೊಂದಿಗೆ ಆಧಾರ್ ಸಂಖ್ಯೆಯನ್ನು ಜೋಡಿಸಿ ನಂತರ ಅಭ್ಯರ್ಥಿಯ ನೋಂದಣಿ ಸಂಖ್ಯೆ (7 ಅಂಕಿಗಳು) ಯನ್ನು Username ಆಗಿ ಮತ್ತು ಪಾನ್ ಕಾರ್ಡ್ ನಂಬರ್ನ್ನು ಪಾಸ್ವರ್ಡ್ ಆಗಿ ಉಪಯೋಗಿಸಿ ಪ್ರಮಾಣ ಪತ್ರಗಳನ್ನು ಲಾಗಿನ್ ಆದ 3 ರಿಂದ 4 ಗಂಟೆಗಳೊಳಗಾಗಿ ಪಡೆಯಬಹುದಾಗಿದೆ.

ಪ್ರಮಾಣ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳುವ ಹಂತದಲ್ಲಿ ಯಾವುದಾದರೂ ತಾಂತ್ರಿಕ ದೋಷ ಉಂಟಾದಲ್ಲಿ ಸೇವಾಸಿಂಧು ಸಹಾಯವಾಣಿ ಸಂಖ್ಯೆಗಳು 080-22279954, 8088304855 , 9380206704 ಸಂಪರ್ಕಿಸಬಹುದಾಗಿದೆ ಎಂದು ಸುತ್ತೋಲೆ ಹೊರಡಿಸಿದ್ದಾರೆ.

 

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read