ಗಮನಿಸಿ: ಹೈಕೋರ್ಟ್ ಗೆ ಅ.7 ರವರೆಗೆ ದಸರಾ ರಜೆ, ಅ. 8ರಂದು ಕಲಾಪ ಪುನಾರಂಭ

ಬೆಂಗಳೂರು: ಕರ್ನಾಟಕ ಹೈಕೋರ್ಟ್ ಗೆ ಅಕ್ಟೋಬರ್ 7ರವರೆಗೆ ದಸರಾ ರಜೆ ಇದೆ. ಅಕ್ಟೋಬರ್ 8ರಂದು ಹೈಕೋರ್ಟ್ ಕಲಾಪ ಪುನರಾರಂಭವಾಗಲಿದೆ.

 ಸೆಪ್ಟೆಂಬರ್ 27ರ ಶನಿವಾರದಿಂದಲೇ ರಜೆ ಆರಂಭವಾಗಿದ್ದು, ರಜೆ ಅವಧಿಯಲ್ಲಿ ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 3ರಂದು ಬೆಂಗಳೂರು, ಧಾರವಾಡ, ಕಲಬುರಗಿಯಲ್ಲಿ ರಜಾಕಾಲೀನ ಪೀಠಗಳು ತುರ್ತು ಪ್ರಕರಣಗಳ ವಿಚಾರಣೆ ನಡೆಯಲಿದೆ.

ಸೆಪ್ಟೆಂಬರ್ 3ರಂದು ಬೆಂಗಳೂರು ಪೀಠದಲ್ಲಿ ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜ್ ಮತ್ತು ಕೆ. ರಾಜೇಶ್ ರೈ ಅವರ ವಿಭಾಗೀಯ ಪೀಠ ಪ್ರಕರಣಗಳ ವಿಚಾರಣೆ ನಡೆಸಲಿದೆ. ನ್ಯಾಯಮೂರ್ತಿಗಳಾದ ವಿ. ಶ್ರೀಶಾನಂದ ಮತ್ತು ಸಿಎಂ ಪೂಣಚ್ಚ ಏಕ ಸದಸ್ಯ ಪೀಠದಲ್ಲಿನ ಪ್ರಕರಣಗಳ ವಿಚಾರಣೆ ನಡೆಸುವರು.

ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿ ವಿಭಾಗೀಯ ಪೀಠದ ಪ್ರಕರಣ ಮತ್ತು ಏಕಸದಸ್ಯ ಪೀಠದ ಪ್ರಕರಣಗಳ ವಿಚಾರಣೆ ನಡೆಸಲಾಗುವುದು.

ಅಕ್ಟೋಬರ್ 3ರಂದು ಬೆಂಗಳೂರು ಪೀಠದಲ್ಲಿ ನ್ಯಾಯಮೂರ್ತಿಗಳಾದ ಬಿ.ಎಂ. ಶ್ಯಾಮ್ ಪ್ರಸಾದ್ ಮತ್ತು ಕೆ.ವಿ. ಅರವಿಂದ್ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಸುವರು. ನ್ಯಾಯಮೂರ್ತಿಗಳ ಎಂ.ಜಿ.ಎಸ್. ಕಮಲ್ ಮತ್ತು ಸಿ.ಎಂ. ಜೋಶಿ ಪೀಠದಲ್ಲಿನ ಪ್ರಕರಣಗಳ ವಿಚಾರಣೆ ನಡೆಸುವರು ಎಂದು ತಿಳಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read