ಗಮನಿಸಿ : `ರೇಷನ್ ಕಾರ್ಡ್’ ನಲ್ಲಿ ಈ ಸಮಸ್ಯೆಗಳಿದ್ರೆ ಬರಲ್ಲ `ಗೃಹಲಕ್ಷ್ಮಿ-ಅನ್ನಭಾಗ್ಯ’ದ ಹಣ!

ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾದ ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಯರಿಗೆ ಪ್ರತಿ ತಿಂಗಳು 2,000 ರೂ. ಸಹಾಯಧನ ನೀಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಜೊತೆಗೆ 5 ಕೆಜಿ ಅಕ್ಕಿ  ಹಣವನ್ನು ಖಾತೆಗೆ ಜಮಾ ಮಾಡಲಾಗುತ್ತಿದೆ. ಆದರೆ ಕೆಲವರಿಗೆ ಈವರೆಗೂ ಗೃಹಲಕ್ಷ್ಮಿ, ಅನ್ನಭಾಗ್ಯ ಹಣ ಖಾತೆಗೆ ಜಮಾ ಆಗಿಲ್ಲ. ಹೀಗಾಗಿ ಖಾತೆಗೆ ಜಮಾ ಆಗದವರು ರೇಷನ್ ಕಾರ್ಡ್ ನಲ್ಲಿರುವ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಆಹಾರ ಇಲಾಖೆ ಸೂಚನೆ ನೀಡಿದೆ.

ಗೃಹಲಕ್ಷ್ಮಿ  ಯೋಜನೆಯಡಿ ಖಾತೆಗೆ ಹಣ ಬಾರದೇ ಇರುವವರು ಮುಖ್ಯವಾಗಿ ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಒಂದು ವೇಳೆ ಇದನ್ನು ಮಾಡದಿದ್ದರೆ ಗೃಹಲಕ್ಷ್ಮಿಯರ ಖಾತೆಗೆ ಹಣ ಬರಲ್ಲ. ಹೀಗಾಗಿ ಕೂಡಲೇ ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಿ.

ಇನ್ನು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ಫಲಾನುಭವಿ ಕುಟುಂಬಸ್ಥನ ಖಾತೆಗೆ ಹಣ ವರ್ಗಾವಣೆ (DBT) ಆಗುತ್ತಿದೆ. ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ 5 ಕೆಜಿ ಅಕ್ಕಿಗೆ 170 ರೂಪಾಯಿಗಳನ್ನು  ಪ್ರತಿ ವ್ಯಕ್ತಿಗೆ ನೀಡಲಾಗುತ್ತದೆ. ನೇರವಾಗಿ ಮನೆಯ ಮುಖ್ಯಸ್ಥರ ಬ್ಯಾಂಕ್ ಖಾತೆಗೆ  ಹಣ ಜಮಾ ಆಗುತ್ತದೆ. ಆದರೆ ಹೀಗೆ ಹಣ ಜಮಾ ಆಗಲು ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ.

ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿ

ಈಗಾಗಲೇ ಜಾರಿಗೆ ತಂದಿರುವ ಸರ್ಕಾರ ಎಲ್ಲಾ ಯೋಜನೆಗಳಿಗೆ ರೇಷನ್ ಕಾರ್ಡ್ ಕಡ್ಡಾಯವಾಗಿದೆ.ಸರ್ಕಾರ ರೇಷನ್ ಕಾರ್ಡ್  ಗೆ ಇಕೆವೈಸಿ ಮಾಡಿಸುವುದು ಕಡ್ಡಾಯಗೊಳಿಸಿದೆ. ಅಸಲಿ ರೇಷನ್ ಕಾರ್ಡ್ ಯಾವುದು ನಕಲಿ ರೇಷನ್ ಕಾರ್ಡ್ ಯಾವುದು ಎಂಬುದನ್ನು ತಿಳಿಯಲು ಸರ್ಕಾರ ಇಕೆವೈಸಿ ಕಡ್ಡಾಯಗೊಳಿಸಿದೆ.

E-KYC  ಮಾಡಿಸುವುದು ಹೇಗೆ..? ಇಲ್ಲಿದೆ ಮಾಹಿತಿ

ಮೊದಲಿಗೆ, ಗ್ರಾಹಕರು ತಮ್ಮ  ಬ್ಯಾಂಕಿನ ಅಧಿಕೃತ ಪೋರ್ಟಲ್ ಅನ್ನು ತೆರೆಯಬೇಕು ಮತ್ತು ಲಾಗ್ ಇನ್ ಮಾಡಬೇಕು. ಅದರ ನಂತರ, ಕೆವೈಸಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

– ಸೂಚನೆಗಳನ್ನು  ಅನುಸರಿಸಿ ಮತ್ತು ನಿಮ್ಮ ಹೆಸರು, ವಿಳಾಸ, ಹುಟ್ಟಿದ ದಿನಾಂಕ ಇತ್ಯಾದಿಗಳನ್ನು ನಮೂದಿಸಿ.

– ಆಧಾರ್, ಪ್ಯಾನ್  ಮತ್ತು ಇತರ ಅಗತ್ಯ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ನಂತರ ಅಪ್ಲೋಡ್ ಮಾಡಬೇಕು. ಈ ದಾಖಲೆಗಳನ್ನು ಎರಡೂ ಬದಿಗಳಲ್ಲಿ ಸ್ಕ್ಯಾನ್ ಮಾಡುವುದು ಕಡ್ಡಾಯವಾಗಿದೆ.

– ಪ್ರಕ್ರಿಯೆ  ಪೂರ್ಣಗೊಂಡ ನಂತರ, ಸಬ್ಮಿಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇದು ನಿಮಗೆ ಸೇವಾ ವಿನಂತಿ ಸಂಖ್ಯೆಯನ್ನು ನೀಡುತ್ತದೆ. ಕೆವೈಸಿ ನವೀಕರಣ ಮಾಹಿತಿಯನ್ನು ನಂತರ ಗ್ರಾಹಕರಿಗೆ ಸಂದೇಶ ಅಥವಾ ಮೇಲ್ ಮೂಲಕ ತಿಳಿಸಲಾಗುತ್ತದೆ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read