ಗಮನಿಸಿ : `ಗೂಗಲ್ ಪೇ’ ಅಪ್ಲಿಕೇಷನ್ ನಲ್ಲಿ `ಪಿನ್’ ಬದಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಯುಪಿಐ ಆಧರಿತ ಆನ್ಲೈನ್ ಪೇಮೆಂಟ್ ಪ್ಲಾಟ್‌ಫಾರಂ ಗೂಗಲ್ ಪೇ ಇತ್ತೀಚಿನ ದಿನಗಳಲ್ಲಿ ದಿನಸಿ ಅಂಗಡಿಯಿಂದ ಹಿಡಿದು ಆನ್ಲೈನ್ ಇ-ಕಾಮರ್ಸ್ ಪ್ಲಾಟ್‌ಫಾರಂಗಳಲ್ಲಿ ಪಾವತಿ ಮಾಡುವವರೆಗೂ ಹಾಗೇ ಜನರಿಗೆ ದುಡ್ಡು ವರ್ಗಾಯಿಸುವವರೆಗೂ ನೆರವಾಗುತ್ತಿದೆ.

ತನ್ನ ಬಳಕೆದಾರರಿಗೆ ಸುರಕ್ಷಿತ ವಹಿವಾಟುಗಳನ್ನು ಖಾತ್ರಿ ಪಡಿಸುವ ನಿಟ್ಟಿನಲ್ಲಿ ಗೂಗಲ್ ವಹಿವಾಟುಗಳ ಎರಡೂ ಬದಿಗಳಲ್ಲಿ ಎನ್‌ಕ್ರಿಪ್ಷನ್ ಮಾಡುತ್ತದೆ. ಇದರ ಜೊತೆಗೆ ಅಪ್ಲಿಕೇಶನ್‌ನಲ್ಲಿ ಬಳಕೆದಾರರು ಲಾಕ್‌ಸ್ಕ್ರೀನ್ ಫೀಚರ್‌ ಮೂಲಕ ಹೆಚ್ಚುವರಿ ಭದ್ರತಾ ವ್ಯವಸ್ಥೆ ಪಡೆಯಬಹುದು. ಆದರೆ ಮುಖ್ಯವಾದ ವಿಚಾರವೆಂದರೆ, ಪೇಮೆಂಟ್ ಮಾಡುವಾಗ ಬಳಕೆದಾರರು ನಾಲ್ಕು ಅಂಕಿಯ ಯುಪಿಐ ಪಿನ್ ಸೆಟ್ ಮಾಡುವುದು.

ಈ ಯುಪಿಐ ಪಿನ್ ಡೆಬಿಟ್/ಕ್ರೆಡಿಟ್ ಕಾರ್ಡ್ ಪಿನ್ ರೀತಿ ಕೆಲಸ ಮಾಡುತ್ತದೆ. ಅಪ್ಲಿಕೇಶನ್ ಸೆಟ್ಟಿಂಗ್ ಮಾಡುವ ಸಂದರ್ಭದಲ್ಲೇ ಈ ಪಿನ್ ಸೆಟ್ ಮಾಡಲು ಗೂಗಲ್ ಕೇಳುತ್ತದೆ. ಯಾವುದೇ ಇತರೆ ಪಾಸ್‌ವರ್ಡನಂತೆಯೇ ಯುಪಿಐ ಪಿನ್‌ ಅನ್ನೂ ಆಗಾಗ ಬದಲಿಸುತ್ತಿರುವುದು ಉತ್ತಮ.

ಈ ಯುಪಿಐ ಪಿನ್ ಬದಲಿಸುವುದು ಹೇಗೆಂದು ನೀವು ಚಿಂತಿಸುತ್ತಿದ್ದರೆ, ಈ ಕ್ರಮಗಳನ್ನು ಅನುಸರಿಸಿ:

1. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಅಪ್ಲಿಕೇಶನ್ ತೆರೆಯಿರಿ.

2. ನಿಮ್ಮ ಪ್ರೊಫೈಲ್‌ನಲ್ಲಿ ಮೇಲಿನ ಬಲತುದಿಯಲ್ಲಿ ಟ್ಯಾಪ್ ಮಾಡಿ.

3. ಬ್ಯಾಂಕ್ ಖಾತೆಯ ಮೇಲೆ ಟ್ಯಾಪ್ ಮಾಡಿ.

4. ಇದಾದ ಬಳಿಕ ನೀವು ಪಿನ್ ಬದಲಿಸಲು ಇಚ್ಛಿಸುವ ಬ್ಯಾಂಕ್ ಖಾತೆಯ ಮೇಲೆ ಟ್ಯಾಪ್ ಮಾಡಿ.

5. ಮೋರ್‌ ಮೇಲೆ ಟ್ಯಾಪ್ ಮಾಡಿ ಬಳಿಕ ಚೇಂಜ್ ಯುಪಿಐ ಪಿನ್ ಮೇಲೆ ಟ್ಯಾಪ್ ಮಾಡಿ.

6. ಹೊಸ ಯುಪಿಐ ಪಿನ್ ಎಂಟರ್‌ ಮಾಡಿ ಹಾಗೂ ಖಾತ್ರಿ ಪಡಿಸಲು ಮರು ಎಂಟರ್‌ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read