ಗಮನಿಸಿ : ನಾಳೆ ಸಿಎಂ ಸಿದ್ದರಾಮಯ್ಯ ʻಜನತಾ ದರ್ಶನʼ : ಇಂದೇ ಈ ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿಕೊಳ್ಳಿ

ಬೆಂಗಳೂರು :  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ಬೆಳಿಗ್ಗೆ 9.30 ರಿಂದ ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯಮಟ್ಟದ ಜನತಾ ದರ್ಶನ ನಡೆಸಿ, ಜನರ ಅಹವಾಲು ಆಲಿಸಿ, ಸಕಾಲದಲ್ಲಿ ಪರಿಹರಿಸಲಿದ್ದಾರೆ. ಜನತಾ ದರ್ಶನದಲ್ಲಿ ಭಾಗಿಯಾಗುವವರು1902ಕ್ಕೆ ಕರೆಮಾಡಿ ಆನ್‌ಲೈನ್ ಮೂಲಕ ಈಗಲೇ ನೊಂದಾಯಿಸಿಕೊಳ್ಳಬಹುದು.

ಜನತಾ ದರ್ಶನದಲ್ಲಿ ಅಹವಾಲು ಸಲ್ಲಿಸಲು ಆಗಮಿಸುವ ಜನರು ತಮ್ಮ ಗುರುತಿನ ಚೀಟಿಯಾದ ಆಧಾರ್ ಕಾರ್ಡ್ ಅಥವಾ ಪಡಿತರ ಚೀಟಿ ತರಲು ಕೋರಲಾಗಿದೆ ಎಂದು ಎಕ್ಸ್ ನಲ್ಲಿ ಸಚಿವಾಲಯ ಮಾಹಿತಿ ನೀಡಿದೆ.

ನಿಮ್ಮ ಅಹವಾಲುಗಳೊಂದಿಗೆ ಬನ್ನಿ, ಅದನ್ನು ಪರಿಹರಿಸುವ ಹೊಣೆ ನಮ್ಮದು. ನವೆಂಬರ್ 27ರ ಸೋಮವಾರ ನಡೆಯುವ ಜನತಾ ದರ್ಶನದಲ್ಲಿ ಭೇಟಿಯಾಗೋಣ ಎಂದು ಪೋಸ್ಟ್ ಮಾಡಲಾಗಿದೆ.

ಗೃಹ ಕಚೇರಿ ಕೃಷ್ಣಾದಲ್ಲಿ ನವೆಂಬರ್ 27 ರ ಬೆಳಗ್ಗೆ 9 :30 ರಿಂದ ಸಿಎಂ ಸಿದ್ದರಾಮಯ್ಯರಿಂದ ‘ಮುಖ್ಯಮಂತ್ರಿ ಜನತಾ ದರ್ಶನ’ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಹಾಗೂ ಸ್ಥಳದಲ್ಲೇ ಪರಿಹಾರ ಕಲ್ಪಿಸಿ ಕೊಡಲು ಸೂಚಿಸಲಿದ್ದಾರೆ. ಜನಸಾಮಾನ್ಯರ ಸಮಸ್ಯೆ, ಅಹವಾಲುಗಳಿಗೆ ಸ್ಥಳೀಯ ಮಟ್ಟದಲ್ಲೇ ಪರಿಹಾರ ದೊರಕಿಸಿಕೊಡುವ ಉದ್ದೇಶದಿಂದ ಮುಖ್ಯಮಂತ್ರಿಗಳ ನಿರ್ದೇಶನದಂತೆ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಕಳೆದ ತಿಂಗಳಿಂದ ಜಿಲ್ಲಾಮಟ್ಟದಲ್ಲಿ ಜನತಾದರ್ಶನ ಆರಂಭಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read