ರಾಜ್ಯದ ‘ಪಿಂಚಣಿ’ ಫಲಾನುಭವಿಗಳ ಗಮನಕ್ಕೆ : ತಪ್ಪದೇ ಈ ಕೆಲಸ ಮಾಡಲು ಸೂಚನೆ.!

ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿಗಳಾದ ವೃದ್ದಾಪ್ಯ ಯೋಜನೆ, ವಿಧವಾ ಯೋಜನೆ, ಅಂಗವಿಕಲ ಯೋಜನೆ, ಸಂಧ್ಯಾ ಸುರಕ್ಷಾ ಯೋಜನೆ, ಮನಸ್ವಿನಿ ಯೋಜನೆ, ಮೈತ್ರಿ ಯೋಜನೆಗಳ ಮಾಸಿಕ ಪಿಂಚಣಿಯನ್ನು ಫಲಾನುಭವಿಗಳಿಗೆ ಆಧಾರ್ ಆಧಾರಿತ ನೇರ ಹಣ ಸಂದಾಯ ಯೋಜನೆ (ಡಿಬಿಟಿ) ಮೂಲಕ ಪಾವತಿಸುತ್ತಿದ್ದು, ಆಧಾರ್ ಡೃಢಿಕರಣ ವಿಫಲವಾದ 2937 ಫಲಾನುಭವಿಗಳು ಮತ್ತು ಹೆಸರು ಹೊಂದಾಣಿಕೆ ಇರುದ 21 ಫಲಾನುಭವಿಗಳಿಗೆ ಕಳೆದ ಮಾರ್ಚ್-2024 ರಿಂದ ಮಾಸಿಕ ಪಿಂಚಣಿ ಸಂದಾಯವಾಗಿರುವುದಿಲ್ಲ.

ಮಾಸಿಕ ಪಿಂಚಣಿ ಸಂದಾಯವಾಗದೇ ಇರುವ ಫಲಾನುಭವಿಗಳು ಕೂಡಲೇ ಮಂಜೂರಾತಿ ಆದೇಶ ಪತ್ರ, ಆಧಾರ್ ಕಾರ್ಡ್, ಪಾಸ್ ಪುಸ್ತಕ ಮತ್ತು ಎನ್.ಪಿ.ಸಿ.ಐ. ಮ್ಯಾಪಿಂಗ್ ಆಗಿರುವುದರ ಪ್ರತಿಯೊಂದಿಗೆ ಸಂಬಂಧಿಸಿದ ತಾಲ್ಲೂಕು ಕಛೇರಿ/ನಾಡ ಕಛೇರಿಗೆ ಭೇಟಿ ನೀಡಿ ಆಧಾರ್ ಅಪ್ ಡೇಟ್ ಮಾಡಿಸುವಂತೆ ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read