ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿದ ಸಾರ್ವಜನಿಕ ರಜಾದಿನಗಳ ಕ್ಯಾಲೆಂಡರ್ ಪ್ರಕಾರ, ಮಹಾವೀರ್ ಜಯಂತಿಯನ್ನು ಏಪ್ರಿಲ್ 10 ರಂದು (ಗುರುವಾರ) ಆಚರಿಸಲಾಗುವುದು. ಏಪ್ರಿಲ್ 10 ರ ಮಹಾವೀರ್ ಜಯಂತಿಯಂದು ಬ್ಯಾಂಕ್ ಇರಲ್ಲ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ರಜಾದಿನಗಳ ಪಟ್ಟಿಯ ಪ್ರಕಾರ, ಈ ವರ್ಷ ನಿರ್ದಿಷ್ಟ ನಗರಗಳಲ್ಲಿ ಮಾತ್ರ ಮಹಾವೀರ್ ಜಯಂತಿ / ಮಹಾವೀರ್ ಜನ್ಮ ಕಲ್ಯಾಣಕ್ಗಾಗಿ ಏಪ್ರಿಲ್ 10 ರಂದು ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇದರಲ್ಲಿ ಐಜ್ವಾಲ್, ಅಹಮದಾಬಾದ್, ಬೆಂಗಳೂರು, ಬೇಲಾಪುರ, ಭೋಪಾಲ್, ಚೆನ್ನೈ, ಜೈಪುರ, ಕೋಲ್ಕತಾ, ಕಾನ್ಪುರ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ರಾಯ್ಪುರ ಮತ್ತು ರಾಂಚಿ ಸೇರಿದೆ.
ನಿಮಗೆ ಬ್ಯಾಂಕಿನಲ್ಲಿ ಪ್ರಮುಖ ಕೆಲಸ ಇದ್ದರೆ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಯುಪಿಐ ಮತ್ತು ಎಟಿಎಂ ಸೇವೆಗಳು ಸೇರಿದಂತೆ ಆನ್ಲೈನ್ ಬ್ಯಾಂಕಿಂಗ್ ಸೇವೆಗಳು ಬ್ಯಾಂಕ್ ರಜಾದಿನಗಳಲ್ಲಿ ಕಾರ್ಯನಿರ್ವಹಿಸುತ್ತವೆ .
ಬ್ಯಾಂಕ್ ರಜಾದಿನಗಳ ಪಟ್ಟಿ
ಏಪ್ರಿಲ್ 10: ಮಹಾವೀರ್ ಜಯಂತಿ (ಹೆಚ್ಚಿನ ರಾಜ್ಯಗಳು)
ಏಪ್ರಿಲ್ 12: ಎರಡನೇ ಶನಿವಾರ (ಭಾರತದಾದ್ಯಂತ)
ಏಪ್ರಿಲ್ 13: ಸಾಪ್ತಾಹಿಕ ರಜಾದಿನ (ಭಾರತದಾದ್ಯಂತ)
ಏಪ್ರಿಲ್ 14: ಡಾ.ಭೀಮರಾವ್ ಅಂಬೇಡ್ಕರ್ ಜಯಂತಿ ಮತ್ತು ಪ್ರಾದೇಶಿಕ ಹಬ್ಬಗಳು (ಕೆಲವು ರಾಜ್ಯಗಳು)
ಏಪ್ರಿಲ್ 15: ಬಂಗಾಳಿ ಹೊಸ ವರ್ಷ, ಬೋಹಾಗ್ ಬಿಹು, ಹಿಮಾಚಲ ದಿನ (ಕೆಲವು ರಾಜ್ಯಗಳು)
ಏಪ್ರಿಲ್ 16: ಬೋಹಾಗ್ ಬಿಹು (ಗುವಾಹಟಿ)
ಏಪ್ರಿಲ್ 18: ಗುಡ್ ಫ್ರೈಡೆ (ಹೆಚ್ಚಿನ ರಾಜ್ಯಗಳು)
ಏಪ್ರಿಲ್ 20: ಸಾಪ್ತಾಹಿಕ ರಜಾದಿನ (ಭಾರತದಾದ್ಯಂತ)
ಏಪ್ರಿಲ್ 21: ಗರಿಯಾ ಪೂಜಾ (ಅಗರ್ತಲಾ)
ಏಪ್ರಿಲ್ 26: ನಾಲ್ಕನೇ ಶನಿವಾರ (ಭಾರತದಾದ್ಯಂತ)
ಏಪ್ರಿಲ್ 27: ಸಾಪ್ತಾಹಿಕ ರಜಾದಿನ (ಭಾರತದಾದ್ಯಂತ)
ಏಪ್ರಿಲ್ 29: ಭಗವಾನ್ ಪರಶುರಾಮ ಜಯಂತಿ (ಶಿಮ್ಲಾ)
ಏಪ್ರಿಲ್ 30: ಬಸವ ಜಯಂತಿ, ಅಕ್ಷಯ ತೃತೀಯ (ಬೆಂಗಳೂರು)