ಶ್ರೀಲಂಕಾ – ಭೂತಾನ್ ಮಾತ್ರವಲ್ಲ ಕಡಿಮೆ ಬಜೆಟ್‌ನಲ್ಲಿ ಮಾಡಬಹುದು ಈ 5 ದೇಶಗಳ ಪ್ರವಾಸ

ಒಮ್ಮೆಯಾದರೂ ವಿದೇಶಕ್ಕೆ ಹೋಗಬೇಕು ಅನ್ನೋದು ಬಹುತೇಕ ಎಲ್ಲರ ಆಸೆ. ಆದರೆ ಹಣಕಾಸಿನ ಸಮಸ್ಯೆಯಿಂದಾಗಿ ಅದೆಷ್ಟೋ ಮಂದಿಯ ಈ ಬಯಕೆ ಈಡೇರುವುದಿಲ್ಲ. ಈ ರೀತಿಯ ಬಜೆಟ್‌ ಸಮಸ್ಯೆ ಇದ್ದಲ್ಲಿ ಈ 5 ದೇಶಗಳಿಗೆ ಭೇಟಿ ನೀಡಿ. ಇಲ್ಲಿ ಲಕ್ಷಗಟ್ಟಲೆ ಖರ್ಚು ಮಾಡುವ ಅಗತ್ಯವಿಲ್ಲ. ಟಿಕೆಟ್ ದರ, ವಸತಿ ಮತ್ತು ಆಹಾರ ಎಲ್ಲವೂ ತುಂಬಾ ಅಗ್ಗವಾಗಿದೆ.

ಥೈಲ್ಯಾಂಡ್

ದೆಹಲಿಯಿಂದ ಥೈಲ್ಯಾಂಡ್‌ಗೆ ಪ್ರಯಾಣಿಸಲು 24-26 ಸಾವಿರ ರೂಪಾಯಿ ಖರ್ಚಾಗುತ್ತದೆ. ಪ್ರಯಾಣದ ದರ, ವಸತಿ ಮತ್ತು ಆಹಾರ ಎಲ್ಲ ಸೇರಿದರೂ ಹೆಚ್ಚು ಖರ್ಚಾಗುವುದಿಲ್ಲ. ಇಲ್ಲಿ ಪ್ರತಿದಿನದ ಆಹಾರದ ವೆಚ್ಚ 1 ಸಾವಿರ ರೂಪಾಯಿ ಮತ್ತು ವಸತಿ ಬಾಡಿಗೆ ಸುಮಾರು 3000 ಸಾವಿರ ರೂಪಾಯಿಯಷ್ಟಾಗುತ್ತದೆ.

ವಿಯೆಟ್ನಾಂ

ದೆಹಲಿಯಿಂದ ವಿಯೆಟ್ನಾಂಗೆ ಹೋಗಲು 25-37 ಸಾವಿರ ರೂಪಾಯಿ ಖರ್ಚಾಗುತ್ತದೆ. ಇದರಲ್ಲಿ ರೌಂಡ್ ಟ್ರಿಪ್ ಟಿಕೆಟ್‌ಗಳ ಜೊತೆಗೆ ಆಹಾರ ಮತ್ತು ವಸತಿಯನ್ನು ಉತ್ತಮವಾಗಿ ನಿರ್ವಹಿಸಬಹುದು. ಇಲ್ಲಿ ಪ್ರತಿದಿನದ ಆಹಾರದ ವೆಚ್ಚ ಸುಮಾರು 900 ರೂ. ಮತ್ತು ವಸತಿ ಬಾಡಿಗೆ 2000 ಸಾವಿರ ರೂಪಾಯಿ ಆಗುತ್ತದೆ.

ಕಾಂಬೋಡಿಯಾ

ಪುರಾತನ ದೇವಾಲಯಗಳು, ಸುಂದರವಾದ ಕಡಲತೀರಗಳು ಮತ್ತು ಸೀ ಫುಡ್‌ಗೆ ಹೆಸರುವಾಸಿಯಾದ ಕಾಂಬೋಡಿಯಾವನ್ನು ತಲುಪಲು ದೆಹಲಿಯಿಂದ 40-48 ಸಾವಿರ ರೂಪಾಯಿ ಬೇಕು. ಇದು ರೌಂಡ್ ಟ್ರಿಪ್ ಶುಲ್ಕ ಸೇರಿದಂತೆ ವಸತಿ ಮತ್ತು ಆಹಾರವನ್ನು ಒಳಗೊಂಡಿದೆ. ಇಲ್ಲಿ ಪ್ರತಿದಿನ ಆಹಾರದ ವೆಚ್ಚ 1000 ರೂ. ಮತ್ತು ವಸತಿ ಬಾಡಿಗೆ ಸುಮಾರು 4000 ರೂ.

ತೈವಾನ್

ದೆಹಲಿಯಿಂದ ತೈವಾನ್‌ಗೆ ಪ್ರಯಾಣಿಸಲು ಸುಮಾರು 53-80 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಇಲ್ಲಿ ಆಹಾರದ ವೆಚ್ಚ ದಿನಕ್ಕೆ 1500 ರೂ. ಮತ್ತು ವಸತಿ ವೆಚ್ಚ 6000 ರೂ. ಇಲ್ಲಿ ನೀವು ಚೀನೀ ಸಂಸ್ಕೃತಿಯನ್ನು ಬಹಳ ಹತ್ತಿರದಿಂದ ತಿಳಿದುಕೊಳ್ಳಬಹುದು.

ಜಾರ್ಜಿಯಾ

ದೆಹಲಿಯಿಂದ ಜಾರ್ಜಿಯಾಕ್ಕೆ ಪ್ರವಾಸ ಮಾಡಲು 42 ರಿಂದ 62 ಸಾವಿರ ರೂಪಾಯಿಗಳ ಬಜೆಟ್ ಹೊಂದಿರಬೇಕು. ಇದು ರೌಂಡ್ ಟ್ರಿಪ್ ಟಿಕೆಟ್‌ನ ವೆಚ್ಚದೊಂದಿಗೆ ವಸತಿ ಮತ್ತು ಆಹಾರವನ್ನು ಒಳಗೊಂಡಿರುತ್ತದೆ. ಇಲ್ಲಿ ಊಟಕ್ಕೆ ದಿನಕ್ಕೆ 600 ರೂ., ವಸತಿ ದರ ಸುಮಾರು 3 ಸಾವಿರ ರೂ.

 

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read