ಹಣ್ಣಿನಲ್ಲಿ ಮಾತ್ರವಲ್ಲ ಪಪ್ಪಾಯ ಕಾಯಿಯಿಂದ್ಲೂ ಇದೆ ಇಷ್ಟೆಲ್ಲಾ ಪ್ರಯೋಜನ

ಪಪ್ಪಾಯ ಹಣ್ಣು ಆರೋಗ್ಯಕ್ಕೆ ಪ್ರಯೋಜನಕಾರಿ ಅನ್ನೋದು ಎಲ್ಲರಿಗೂ ತಿಳಿದಿದೆ. ಅದೇ ರೀತಿ ಹಸಿ ಪಪ್ಪಾಯಿ ಕೂಡ ಉಪಯುಕ್ತವಾಗಿದೆ. ಹಸಿ ಪಪ್ಪಾಯಿ ಹೊಟ್ಟೆಯ ಕಾಯಿಲೆಗಳನ್ನೂ ಗುಣಪಡಿಸುತ್ತದೆ. ಇದಲ್ಲದೆ ಕೀಲುಗಳ ಸಮಸ್ಯೆ ಇರುವವರು ಹಸಿ ಪಪ್ಪಾಯಿಯನ್ನು ಸೇವಿಸಬೇಕು.

ತೂಕ ಕಡಿಮೆ ಮಾಡಿಕೊಳ್ಳಲು ಸಹ ಇದು ಸಹಾಯ ಮಾಡುತ್ತದೆ. ಪಪ್ಪಾಯ ಕಾಯಿಯಲ್ಲಿ ಪಪೈನ್ ಎಂಬ ಅಂಶವಿದ್ದು, ಅದು ಆರೋಗ್ಯಕ್ಕೆ ಒಳ್ಳೆಯದು. ಇದನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಜೀರ್ಣಕ್ರಿಯೆ ಸುಲಲಿತವಾಗುತ್ತದೆ. ಡಯಾಬಿಟಿಸ್‌ ಸಮಸ್ಯೆ ಇರುವವರು ಪಪ್ಪಾಯ ಪಲ್ಯ ಅಥವಾ ಸಾಂಬಾರ್‌ ಮಾಡಿಕೊಂಡು ತಿನ್ನಿ.

ಬೆಳಗ್ಗೆ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದು. ಹಾಗಾಗಿ ಪಪ್ಪಾಯ ಹಣ್ಣನ್ನು ಕೂಡ ಬೆಳಗ್ಗೆ ತಿನ್ನಿ. ಮಕ್ಕಳು ಹಸಿದ ಹೊಟ್ಟೆಯಲ್ಲಿ ಪಪ್ಪಾಯ ಹಣ್ಣುಗಳನ್ನು ತಿಂದರೆ ಹೆಚ್ಚು ಪ್ರಯೋಜನಕಾರಿ. ಪಪ್ಪಾಯ ಕಾಯಿಯನ್ನು ಪಲ್ಯ ಮಾಡಿಕೊಂಡು ತಿನ್ನಬಹುದು.

ಹಸಿ ಪಪ್ಪಾಯಿಯಲ್ಲಿರುವ ವಿಟಮಿನ್‌ಗಳು ಮತ್ತು ಇತರ ಪೋಷಕಾಂಶಗಳು ನಿಮ್ಮ ತ್ವಚೆಯನ್ನು ಆರೋಗ್ಯಕರವಾಗಿ ಮಾಡುತ್ತದೆ. ಪಪ್ಪಾಯ ಕಾಯಿಯನ್ನು ಆಗಾಗ ಸೇವನೆ ಮಾಡುವುದರಿಂದ ಯಾವುದೇ ರೀತಿಯ ಗಾಯವನ್ನು ವಾಸಿಮಾಡುವ ದೇಹದ ಸಾಮರ್ಥ್ಯವನ್ನು ಹೆಚ್ಚಾಗುತ್ತದೆ. ಹಾಗಾಗಿ ಹಸಿ ಪಪ್ಪಾಯಿಯನ್ನು ಇಷ್ಟಪಡದವರು ಅದನ್ನು ಪಲ್ಯ ಅಥವಾ ಸಾಂಬಾರ್‌ ಮಾಡಿಕೊಂಡು ತಿನ್ನಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read