Video: ತೆಲಂಗಾಣದಲ್ಲಿ ಕಾಶ್ಮೀರ ಸೃಷ್ಟಿಸಿದ ಆಲಿಕಲ್ಲು ಮಳೆ

ಬಿಸಿಲಿನ ಬೇಗೆಯಲ್ಲಿ ಬೇಯುತ್ತಿರುವ ತೆಲಂಗಾಣದಲ್ಲಿ ಗುರುವಾರದಂದು ಆಲಿಕಲ್ಲು ಮಳೆಯಾಗಿದೆ. ವಿಕಾರಾಬಾದ್, ಸಂಗಾರೆಡ್ಡಿ ಹಾಗೂ ಮುಲುಗು ಸೇರಿದಂತೆ ರಾಜ್ಯದ ರಸ್ತೆಗಳು ಹಾಗೂ ಮೈದಾನಗಳ ತುಂಬ ಆಲಿಕಲ್ಲಿನ ಹಿಮದ ತುಂಡುಗಳ ರಾಶಿ ಕಾಣಿಸಿಕೊಂಡಿದೆ.

ವಿಕಾರಾಬಾದ್ ಜಿಲ್ಲೆಯ ಮಾರ್ಪಲ್ಲೆ ಗ್ರಾಮದಲ್ಲಿ ಭಾರೀ ಆಲಿಕಲ್ಲುಗಳ ಸುರಿಮಳೆಯಾದ ಬೆನ್ನಲ್ಲೇ ರೈತಾಪಿ ವರ್ಗದಲ್ಲಿ ಒಂದು ರೀತಿಯ ಆತಂಕ ಮನೆ ಮಾಡಿದೆ ಎಂದು ತೆಲಂಗಾಣ ಟುಡೇ ವರದಿ ಮಾಡಿದೆ. ಬೆಳೆ ಕಟಾವು ಸಂದರ್ಭದಲ್ಲೇ ಹೀಗೆ ಆಲಿಕಲ್ಲು ಮಳೆಯಾಗುತ್ತಿರುವುದು ಬೆಳೆಗಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.

ಬಿಸಿಲಿನ ಬೇಗೆಗೆ ಹೆಸರಾದ ತೆಲಂಗಾಣ ಪ್ರಸ್ಥಭೂಮಿಯಲ್ಲಿ ಕಾಶ್ಮೀರದ ಹಿಮಾವೃತ ಪ್ರದೇಶಗಳನ್ನು ನೆನಪಿಸುವಂಥ ದೃಶ್ಯಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

https://twitter.com/VizagWeather247/status/1636282179532759040?ref_src=twsrc%5Etfw%7Ctwcamp%5Etweetembed%7Ctwterm%5E1636282179532759040%7Ctwgr%5E6f73d2908ac5294ac4c7f09be1feb91619574844%7Ctwcon%5Es1_&ref_url=https%3A%2F%2Fwww.news18.com%2Fbuzz%2Fnot-kashmir-this-is-telangana-after-sudden-hailstorm-7324321.html

https://twitter.com/anusha_puppala/status/1636326645882826752?ref_src=twsrc%5Etfw%7Ctwcamp%5Etweetembed%7Ctwterm%5E1636326645882826752%7Ctwgr%5E6f73d2908ac5294ac4c7f09be1feb91619574844%7Ctwcon%5Es1_&ref_url=https%3A%2F%2Fwww.news18.com%2Fbuzz%2Fnot-kashmir-this-is-telangana-after-sudden-hailstorm-7324321.html

https://twitter.com/pavan_sunny52/status/1636331916461760512?ref_src=twsrc%5Etfw%7Ctwcamp%5Etweetembed%7Ctwterm%5E1636331916461760512%7Ctwgr%5E6f73d2908ac5294ac4c7f09be1feb91619574844%7Ctwcon%5Es1_&ref_url=https%3A%2F%2Fwww.news18.com%2Fbuzz%2Fnot-kashmir-this-is-telangana-after-sudden-hailstorm-7324321.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read