ಯಾರ ವೈಯಕ್ತಿಕ ಜೀವನದಲ್ಲಿ ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ: ಸಲಿಂಗ ವಿವಾಹದ ಬಗ್ಗೆ ಕಿರಣ್ ರಿಜಿಜು ಪ್ರತಿಕ್ರಿಯೆ

ನವದೆಹಲಿ: ಸಲಿಂಗ ವಿವಾಹದ ಸುಪ್ರೀಂ ಕೋರ್ಟ್‌ನ ಕಾನೂನು ಮಾನ್ಯತೆಯನ್ನು ಕೇಂದ್ರವು ವಿರೋಧಿಸಿದ ಒಂದು ದಿನದ ನಂತರ ಕಾನೂನು ಸಚಿವ ಕಿರಣ್ ರಿಜಿಜು ಅವರು, ಸರ್ಕಾರ ವ್ಯಕ್ತಿಗಳ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಚಟುವಟಿಕೆಗಳಿಗೆ ಭಂಗ ತರುವುದಿಲ್ಲ. ಆದರೆ, ಮದುವೆಗೆ(Institution of marriage) ಸಂಬಂಧಿಸಿದ ವಿಷಯ ಪಾಲಿಸಿ ವಿಷಯವಾಗಿದೆ ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರದ ನಿಲುವು ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಿಜಿಜು, ಸರ್ಕಾರ ಯಾರ ವೈಯಕ್ತಿಕ ಜೀವನ, ವೈಯಕ್ತಿಕ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಆದ್ದರಿಂದ ಯಾವುದೇ ಗೊಂದಲ ಬೇಡ. ಮದುವೆ ನಂತರ ಅದು ನೀತಿಯ ವಿಷಯವಾಗಿದೆ ಎಂದರು.

ವ್ಯಕ್ತಿಗಳ, ನಾಗರಿಕರ ವೈಯಕ್ತಿಕ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಚಟುವಟಿಕೆಗಳು ಸರ್ಕಾರದಿಂದ ಎಂದಿಗೂ ತೊಂದರೆಗೊಳಗಾಗುವುದಿಲ್ಲ, ನಿಯಂತ್ರಿಸುವುದಿಲ್ಲ, ಪ್ರಶ್ನಿಸುವುದಿಲ್ಲ. ನೀವು ಅದರ ಬಗ್ಗೆ ತುಂಬಾ ಸ್ಪಷ್ಟವಾಗಿರಬೇಕು. ಈ ಬಗ್ಗೆ ಸ್ಪಷ್ಟವಾದ ವ್ಯತ್ಯಾಸವಿದೆ ಎಂದು ಅವರು ಸಂಸತ್ ಭವನದ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read