ಮಹಾ ಕುಂಭಕ್ಕೆ ಹೋಗಲಾಗದ ನೋಯ್ಡಾ ನಿವಾಸಿಗಳಿಂದ ಈಜುಕೊಳದಲ್ಲಿಯೇ ʼತ್ರಿವೇಣಿ ಸಂಗಮʼ ಸೃಷ್ಟಿ | Viral Video

ಉತ್ತರ ಪ್ರದೇಶದ ನೋಯ್ಡಾದ ಸೊಸೈಟಿಯ ಸದಸ್ಯರು ಮಹಾ ಕುಂಭಕ್ಕೆ ಹೋಗಲು ಸಾಧ್ಯವಾಗದ ಕಾರಣ ಈಜುಕೊಳವನ್ನೇ ತ್ರಿವೇಣಿ ಸಂಗಮವೆಂದು ಭಾವಿಸಿ ಅದರಲ್ಲಿ ಪುಣ್ಯ ಸ್ನಾನ ಮಾಡಿದ ಘಟನೆ ನಡೆದಿದೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಿಂದ ತ್ರಿವೇಣಿ ಸಂಗಮದ ಪವಿತ್ರ ಜಲವನ್ನು ತಂದು ಈಜುಕೊಳದಲ್ಲಿ ಹಾಕಿ, ನಂತರ ಸೊಸೈಟಿಯ ಮಹಿಳೆಯರು ಅದರಲ್ಲಿ ಸ್ನಾನ ಮಾಡಿದ್ದಾರೆ.

ಈ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೋಯ್ಡಾದ ಎಟಿಎಸ್ ಸೊಸೈಟಿಯ ಮಹಿಳೆಯರು ತ್ರಿವೇಣಿ ಸಂಗಮದ ಪವಿತ್ರ ಜಲವನ್ನು ಬೆರೆಸಿದ ಈಜುಕೊಳದಲ್ಲಿ ಸ್ನಾನ ಮಾಡುವಾಗ “ಹರ ಹರ್ ಗಂಗೆ” ಘೋಷಣೆಗಳನ್ನು ಕೂಗಿ ಪೂಜೆಗಳನ್ನು ಸಲ್ಲಿಸಿದರು ಎಂದು ವರದಿಯಾಗಿದೆ.

ಮಹಾ ಕುಂಭ 2025 ರಲ್ಲಿ ಸುಮಾರು 60 ಕೋಟಿ ಯಾತ್ರಿಕರು ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಪವಿತ್ರ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲು ಭೇಟಿ ನೀಡಿದ್ದಾರೆ.

ಇನ್ನೊಂದೆಡೆ, ಮಹಾ ಕುಂಭಕ್ಕೆ ಭೇಟಿ ನೀಡಲು ಸಾಧ್ಯವಾಗದವರಿಗಾಗಿ ಸ್ಥಳೀಯ ಉದ್ಯಮಿ ದೀಪಕ್ ಗೋಯಲ್ “ಡಿಜಿಟಲ್ ಸ್ನಾನ” ಎಂಬ ಸೇವೆಯನ್ನು ಆರಂಭಿಸಿದ್ದಾರೆ. ಭಕ್ತರು ತಮ್ಮ ಫೋಟೋಗಳನ್ನು ವಾಟ್ಸಾಪ್ ಮೂಲಕ ಕಳುಹಿಸಿದರೆ, ಅವುಗಳನ್ನು ಸಂಗಮದಲ್ಲಿ ಮುಳುಗಿಸಲಾಗುತ್ತದೆ.

ಈ ಸಾಂಕೇತಿಕ ಕಾರ್ಯಕ್ಕೆ ಒಬ್ಬ ವ್ಯಕ್ತಿಗೆ 1,100 ರೂ. ಶುಲ್ಕ ವಿಧಿಸಲಾಗುತ್ತದೆ. ಈ ವಿಶಿಷ್ಟ ಸೇವೆಯ ವಿಡಿಯೋ ವೈರಲ್ ಆಗಿದ್ದು, ಟೀಕೆ ಮತ್ತು ಕುತೂಹಲಕ್ಕೆ ಕಾರಣವಾಗಿದೆ. ಕೆಲವರು ಇದನ್ನು ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುವುದು ಎಂದು ಟೀಕಿಸಿದರೆ, ಇನ್ನು ಕೆಲವರು ಇದನ್ನು ಅನುಕೂಲಕರ ಪರ್ಯಾಯವೆಂದು ಪರಿಗಣಿಸಿದ್ದಾರೆ.

ಕುಂಭ ಮೇಳವು ಪ್ರತಿ 12 ವರ್ಷಗಳಿಗೊಮ್ಮೆ ನಡೆಯುತ್ತದೆ ಮತ್ತು ಮಹಾ ಕುಂಭವು 12 ಕುಂಭಗಳ ನಂತರ ನಡೆಯುತ್ತದೆ. ಆದ್ದರಿಂದ ಮಹಾ ಕುಂಭವು 144 ವರ್ಷಗಳ ನಂತರ ಬರುತ್ತದೆ. ಈ ಬಾರಿ ಮಹಾ ಕುಂಭ ಸ್ನಾನವು ಜನವರಿ 1 ರಂದು ಪ್ರಾರಂಭವಾಗಿದ್ದು 2025 ಫೆಬ್ರವರಿ 26 ರಂದು ಮಹಾಶಿವರಾತ್ರಿಯ ಸಂದರ್ಭದಲ್ಲಿ ಮುಕ್ತಾಯವಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read