Watch Video | ಮಾಯಾನಗರಿಯ ಲೋಕಲ್ ರೈಲಿನಲ್ಲಿ ನಾರ್ವೇಯನ್ ನೃತ್ಯ ತಂಡದ ಝಲಕ್

ನಾರ್ವೇಯನ್ ನೃತ್ಯ ತಂಡ ’ಕ್ವಿಕ್ ಸ್ಟೈಲ್’ ಎಲ್ಲೆಡೆ ತನ್ನ ಛಾಪು ಮೂಡಿಸುತ್ತಾ ಸಾಗಿರುವುದು ನೆಟ್ಟಿಗರಿಗೆ ಚೆನ್ನಾಗಿ ತಿಳಿದಿರುವ ವಿಚಾರ. ಇದೀಗ ಬಾಲಿವುಡ್ ಹಿಟ್ ಹಾಡು ʼಕಾಲಾ ಚಷ್ಮಾʼ ಹಾಡಿಗೆ ಹೆಜ್ಜೆ ಹಾಕುತ್ತಾ ಇನ್ನಷ್ಟು ವೈರಲ್‌ ಆಗಿದೆ ಈ ತಂಡ.

ಸದ್ಯ ಮುಂಬಯಿಯಲ್ಲಿರುವ ಕ್ವಿಕ್ ಸ್ಟೈಲ್ ಕನಸಿನ ನಗರಿಯಲ್ಲಿ ಭಾರೀ ಹವಾ ಎಬ್ಬಿಸಿದೆ. ಮುಂಬಯಿಯ ಉಪನಗರ ರೈಲೊಂದರಲ್ಲಿ ಶೂಟ್ ಮಾಡಲಾದ ವಿಡಿಯೋವೊಂದನ್ನು ತಂಡ ಪೋಸ್ಟ್ ಮಾಡಿದೆ.

’ಲೇಕೆ ಪೆಹಲಾ ಪೆಹಲಾ ಪ್ಯಾರ್‌’ನ ರೀಮಿಕ್ಸ್ ವರ್ಶನ್‌ಗೆ ಸಖತ್ತಾಗಿ ಹೆಜ್ಜೆ ಹಾಕಿದ ಈ ತಂಡದ ನೃತ್ಯವನ್ನು ಕಂಡು ಲೋಕಲ್ ಟ್ರೈನಿನ ಪ್ರಯಾಣಿಕರು ಎಂಜಾಯ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

“ಭಾರತದ ಸ್ಥಳೀಯ ರೈಲಿನಲ್ಲಿ ನಮ್ಮ ಮೊದಲ ಹೆಜ್ಜೆ #Mumbai,” ಎಂದು ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ.

ತಂಡದ ನೃತ್ಯ ಪ್ರದರ್ಶನಗಳ ಛಲಕ್‌ಗೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳೂ ಸಹ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವೇಳೆ, ವಿರಾಟ್ ಕೊಹ್ಲಿ ಸಹ ತಮ್ಮೊಂದಿಗೆ ಸ್ಟೆಪ್ ಹಾಕಿರುವ ತುಣುಕನ್ನೂ ಸಹ ಕ್ವಿಕ್ ಸ್ಟೆಪ್ ಶೇರ್‌ ಮಾಡಿಕೊಂಡಿದೆ.

https://www.youtube.com/watch?v=YX2_kirl6iU

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read