Shocking Video | ಶ್ವಾನದ ವಿಚಾರಕ್ಕೆ ಕಲಹ; ಮಹಿಳೆಗೆ ಕಪಾಳ ಮೋಕ್ಷ ಮಾಡಿದ ನಿವೃತ್ತ ಐಎಎಸ್​ ಅಧಿಕಾರಿ

ಸಾಕು ಪ್ರಾಣಿಯನ್ನು ಹಿಡಿದಿದ್ದ ಮಹಿಳೆ ಹಾಗೂ ನಿವೃತ್ತ ಐಎಎಸ್​ ಅಧಿಕಾರಿಯೊಂದಿಗೆ ವಾಗ್ವಾದ ತಾರಕಕ್ಕೇರಿದ ಪರಿಣಾಮ ನಿವೃತ್ತ ಐಎಎಸ್​ ಅಧಿಕಾರಿ ಮಹಿಳೆಗೆ ಕಪಾಳಮೋಕ್ಷ ಮಾಡಿದ ಘಟನೆಯು ನೋಯ್ಡಾದ ಸೆಕ್ಟರ್​ 18ರ ಪಾರ್ಕ್​ ಲಾರೇಟ್​ ಸೊಸೈಟಿಯಲ್ಲಿ ನಡೆದಿದೆ. ನಿವೃತ್ತ ಐಎಎಸ್​ ಅಧಿಕಾರಿಯನ್ನು ಆರ್.​ಪಿ. ಗುಪ್ತಾ ಎಂದು ಗುರುತಿಸಲಾಗಿದೆ. ಈ ಸಂಬಂಧ ನೋಯ್ಡಾ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ನಿವೃತ್ತ ಐಎಎಸ್​ ಅಧಿಕಾರಿ ಹಾಗೂ ನಾಯಿ ಮಾಲೀಕೆ ಇಬ್ಬರೂ ತಮ್ಮ ತಮ್ಮ ಫೋನ್​ಗಳಲ್ಲಿ ಘಟನೆ ಚಿತ್ರೀಕರಿಸಲು ಮುಂದಾಗಿದ್ದು ಈ ವೇಳೆ ಇಬ್ಬರ ನಡುವೆ ಗಲಾಟೆ ಆರಂಭಗೊಂಡಿದೆ. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಘಟನೆಯ ವಿಡಿಯೋ ಮಾಡಲು ಯತ್ನಿಸುತ್ತಿದ್ದ ನಿವೃತ್ತ ಐಎಎಸ್​ ಅಧಿಕಾರಿಯ ಕೈನಿಂದ ಮಹಿಳೆಯು ಮೊಬೈಲ್​ ಫೋನ್​ ಕಸಿಯಲು ಯತ್ನಿಸುತ್ತಿರೋದನ್ನು ಕಾಣಬಹುದಾಗಿದೆ. ಇದಾದ ಬಳಿಕ ಗುಪ್ತಾ ಮಹಿಳೆಗೆ ಕಪಾಳ ಮೋಕ್ಷ ಮಾಡಿದ್ದಾರೆ.

ಮಹಿಳೆಯ ಪತಿ ಎಂದು ಹೇಳಲಾದ ಇನ್ನೊಬ್ಬ ವ್ಯಕ್ತಿಯು ಮಹಿಳೆಗೆ ಕಪಾಳ ಮೋಕ್ಷ ಮಾಡಿದ ಬಳಿಕ ಗುಪ್ತಾರಿಗೆ ಥಳಿಸುತ್ತಿರೋದನ್ನೂ ಸಹ ವಿಡಿಯೋದಲ್ಲಿ ನೋಡಬಹುದಾಗಿದೆ. ಪೊಲೀಸ್​ ಕಮಿಷನರೇಟ್​, ಗೌತಮ್​ ಬುದ್ಧ ನಗರ್​ ಎಕ್ಸ್​​ನಲ್ಲಿ ಲಿಫ್ಟ್​ನಲ್ಲಿ ನಾಯಿಯನ್ನು ಕೊಂಡೊಯ್ಯುವ ವಿಚಾರದಲ್ಲಿ ಈ ಗಲಾಟೆ ಸಂಭವಿಸಿದೆ ಎಂದು ಹೇಳಿದ್ದಾರೆ.

https://twitter.com/i/status/1719173588354498877

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read