‘ನಮ್ಮನ್ನು ಬೆದರಿಸಲು ಯಾರಿಗೂ ಲೈಸೆನ್ಸ್ ನೀಡಿಲ್ಲ’: ಭಾರತದೊಂದಿಗಿನ ಘರ್ಷಣೆ ಹೊತ್ತಲ್ಲೇ ಚೀನಾದಿಂದ ಹಿಂದಿರುಗಿದ ಮಾಲ್ಡೀವ್ಸ್ ಅಧ್ಯಕ್ಷ ಹೇಳಿಕೆ

ನವದೆಹಲಿ: ‘ನಮ್ಮನ್ನು ಬೆದರಿಸುವುದಕ್ಕೆ ಯಾರಿಗೂ ಪರವಾನಗಿ ಇಲ್ಲ’ ಎಂದು ಮಾಲ್ಡೀವ್ಸ್ ಅಧ್ಯಕ್ಷ ಡಾ. ಮೊಹಮ್ಮದ್ ಮುಯಿಝು ಹೇಳಿದ್ದಾರೆ.

ಭಾರತದೊಂದಿಗಿನ ಘರ್ಷಣೆ ಹೊತ್ತಲ್ಲೇ ಅವರಿಂದ ಇಂತಹ ಹೇಳಿಕೆ ಬಂದಿದೆ. ಅವರು ತಮ್ಮ ಮೊದಲ ಅಂತಾರಾಷ್ಟ್ರೀಯ ಅಧಿಕೃತ ಚೀನಾ ಭೇಟಿಯಿಂದ ಹಿಂದಿರುಗಿದ ನಂತರ, ತಮ್ಮ ರಾಷ್ಟ್ರವು ಇತರರಿಂದ ಬೆದರಿಸುವುದನ್ನು ಅನುಮತಿಸುವುದಿಲ್ಲ ಎಂದು ಹೇಳಿದ್ದು, ಇದು ಭಾರತ ಉದ್ದೇಶಿಸಿ ನೀಡಿದ ಹೇಳಿಕೆ ಎಂದು ಪರಿಗಣಿಸಲಾಗಿದೆ.

“ನಾವು ಚಿಕ್ಕವರಾಗಿರಬಹುದು. ಆದರೆ, ಅದು ನಮ್ಮನ್ನು ಬೆದರಿಸುವುದಕ್ಕೆ ನಿಮಗೆ ಪರವಾನಗಿ ನೀಡುವುದಿಲ್ಲ” ಎಂದು ಅಧ್ಯಕ್ಷ ಮುಯಿಜ್ಜು ಚೀನಾದಿಂದ ಹಿಂದಿರುಗಿದ ವೆಲಾನಾ ವಿಮಾನ ನಿಲ್ದಾಣದಲ್ಲಿ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ಹಿಂದೂ ಮಹಾಸಾಗರವು ಯಾವುದೇ ನಿರ್ದಿಷ್ಟ ದೇಶಕ್ಕೆ ಸೇರಿಲ್ಲ. ನಾವು ಸಾಗರದಲ್ಲಿ ಸಣ್ಣ ದ್ವೀಪಗಳನ್ನು ಹೊಂದಿದ್ದರೂ, ನಾವು 900,000 ಚದರ ಕಿಲೋಮೀಟರ್ಗಳಷ್ಟು ವಿಶಾಲವಾದ ವಿಶೇಷ ಆರ್ಥಿಕ ವಲಯವನ್ನು ಹೊಂದಿದ್ದೇವೆ. ಈ ಸಾಗರದ ಅತಿದೊಡ್ಡ ಪಾಲನ್ನು ಹೊಂದಿರುವ ದೇಶಗಳಲ್ಲಿ ಮಾಲ್ಡೀವ್ಸ್ ಒಂದಾಗಿದೆ. ಸಾಗರವು ಯಾವುದೇ ನಿರ್ದಿಷ್ಟವಾದಕ್ಕೆ ಸೇರಿಲ್ಲ ಎಂದು ಅವರು ಹೇಳಿದ್ದಾರೆ.

ಅವರ ಹೇಳಿಕೆ ಪ್ರಕಾರ ಸ್ಪಷ್ಟವಾದ ಉಲ್ಲೇಖವು ಭಾರತವಾಗಿದೆಯಾದರೂ, ಅದನ್ನು ಅವರು ಹೆಸರಿಸಿಲ್ಲ. ಈ ಬಗ್ಗೆ  ಭಾರತದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆಯನ್ನು ಇನ್ನೂ ನೀಡಲಾಗಿಲ್ಲ,

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read