ನವದೆಹಲಿ: ಕದನ ವಿರಾಮಕ್ಕೆ ಯಾವುದೇ ನಾಯಕ ಒತ್ತಾಯಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಲೋಕಸಭೆಯಲ್ಲಿ ಆಪರೇಷನ್ ಸಿಂದೂರ ಕುರಿತಾದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಪರೇಷನ್ ಸಿಂದೂರ ಇನ್ನೂ ನಿಂತಿಲ್ಲ. ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ನಮ್ಮ ಸೇನೆಯ ಪ್ರಯತ್ನ ಯಶಸ್ವಿಯಾಗಿದೆ. ನಮ್ಮ ಸೇನೆಯ ದಾಳಿ ಪಾಕಿಸ್ತಾನವನ್ನು ಮಂಡಿಯೂರುವಂತೆ ಮಾಡಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಕಾರ್ಗಿಲ್ ವಿಜಯೋತ್ಸವವನ್ನು ಇದುವರೆಗೂ ಮಾಡಿಲ್ಲ. ಕಾರ್ಗಿಲ್ ಯೋಧರನ್ನು ಕೂಡ ಬೆಂಬಲಿಸಿಲ್ಲ. ಕಾಂಗ್ರೆಸ್ನವರು ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡಿದ್ದಾರೆ. ಪಾಕಿಸ್ತಾನ ಉಗ್ರರಿಂದ ಪಹಲ್ಂಮ್ ದಾಳಿ ನಡೆದಿದ್ದು, ಅದಕ್ಕೂ ಕಾಂಗ್ರೆಸ್ ನವರು ಸಾಕ್ಷ್ಯ ಕೇಳುತ್ತಿದ್ದಾರೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಎತ್ತಿದ ಪ್ರಶ್ನೆಗಳಿಗೆ ಈಗ ಸಾಕ್ಷ್ಯ ಸಿಕ್ಕಿದೆ. ಭಾರತದ ರಕ್ಷಣಾ ವ್ಯವಸ್ಥೆ ಬಗ್ಗೆ ಇಡಿ ವಿಶ್ವವೇ ಮಾತನಾಡುತ್ತಿದೆ. ಭಾರತೀಯ ಸೇನೆಗೆ ಕಾಂಗ್ರೆಸ್ ಬೆಂಬಲಿಸಲಿಲ್ಲ. ಇದು ದೇಶದ ದೌರ್ಭಾಗ್ಯ. ಆಪರೇಷನ್ ಸಿಂದೂರ್ ನಲ್ಲಿ ವಿಶ್ವದ ಯಾವುದೇ ನಾಯಕ ಮಧ್ಯಸ್ಥಿಕೆ ವಹಿಸಿಲ್ಲ. ಅಮೆರಿಕ ಉಪಾಧ್ಯಕ್ಷ ನಮ್ಮನ್ನು ಸಂಪರ್ಕಿಸಲು ಯತ್ನಿಸಿದ್ದರು. ನಾನು ಸಂಪರ್ಕಕ್ಕೆ ಸಿಗಲಿಲ್ಲ ಎಂದು ಟ್ರಂಪ್ ಕದನ ವಿರಾಮಕ್ಕೆ ಮೋದಿ ಟಾಂಗ್ ಕೊಟ್ಟಿದ್ದಾರೆ.
ಪಾಕಿಸ್ತಾನದ ಉಗ್ರರ ನೆಲೆಗಳು ನಾಶವಾಗಿವೆ. ಜಿನ್ನಾ ಲ್ಯಾಂಡ್ ನ ಜೆಟ್ ಗಳು ಪುಡಿಪುಡಿಯಾಗಿವೆ ಎಂದು ಸೇನೆಯ ಪರಾಕ್ರಮವನ್ನು ಮೋದಿ ಕೊಂಡಾಡಿದ್ದಾರೆ. ಪಾಕಿಸ್ತಾನ ಕಳುಹಿಸಿದ ಎಲ್ಲಾ ಡ್ರೋನ್ ಕ್ಷಿಪಣಿಗಳನ್ನು ನಾಶ ಮಾಡಲಾಗಿದೆ.