ʼನಾಟು ನಾಟುʼ ಹಾಡು ಬಳಸಿಕೊಂಡು ಪೊಲೀಸ್​ ಇಲಾಖೆಯಿಂದ ಹೀಗೊಂದು ಟ್ವೀಟ್​….!

ಜೈಪುರ: ಎಸ್​.ಎಸ್.​ ರಾಜಮೌಳಿ ಅವರ RRR ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ. ಚಿತ್ರದ ʼನಾಟು ನಾಟುʼ ಟ್ರ್ಯಾಕ್ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಆರ್‌ಆರ್‌ಆರ್ ತಂಡ ಖುಷಿ ಪಡುತ್ತಿದ್ದರೆ, ಈ ವಿಶೇಷ ವಿಜಯವನ್ನು ಇಡೀ ದೇಶವೇ ಸಂಭ್ರಮಿಸಿದೆ.

ಇದೇ ವೇಳೆ ಈ ಹಾಡಿನ ಮೀಮ್ಸ್​ಗಳೂ ಶುರುವಾಗಿವೆ. ಜೈಪುರ ಪೊಲೀಸರು ಕುಡಿದು ವಾಹನ ಚಲಾಯಿಸುವುದರ ವಿರುದ್ಧ ನಾಗರಿಕರಿಗೆ ಸಲಹೆ ನೀಡಲು ಇದೇ ಹಾಡನ್ನು ಬಳಸಿಕೊಂಡಿದ್ದಾರೆ.

ಪೊಲೀಸ್ ಇಲಾಖೆಯ ಟ್ವಿಟ್ಟರ್ ಖಾತೆಯಲ್ಲಿ ಇದನ್ನು ಶೇರ್​ ಮಾಡಲಾಗಿದೆ. ಎನ್​ಟಿಆರ್​ ಮತ್ತು ರಾಮ್ ಚರಣ್ ʼನಾಟು ನಾಟುʼ ಗೆ ನೃತ್ಯ ಮಾಡುತ್ತಿರುವ ಸ್ಟಿಲ್ ಅನ್ನು ಇದು ಹಂಚಿಕೊಂಡಿದೆ. ನಾಟು ನಾಟು ಸಾಹಿತ್ಯಕ್ಕೆ ಟ್ವಿಸ್ಟ್ ನೀಡುವ ಮೂಲಕ ಪೊಲೀಸರು “ಡ್ರೈವಿಂಗ್ ಮಾಡುವಾಗ ಕುಡಿಯಬೇಡಿ ಎಂದು ಹೇಳಿ” ಎಂದು ಬದಲಾಯಿಸಿದ್ದಾರೆ.

ಮದ್ಯಪಾನ ಮಾಡುವುದು ಮತ್ತು ವಾಹನ ಚಾಲನೆ ಮಾಡುವುದು ಗಂಭೀರ ಅಪರಾಧ ಮತ್ತು ದುರಂತ ಪರಿಣಾಮಗಳನ್ನು ಉಂಟುಮಾಡಬಹುದು. ಜವಾಬ್ದಾರಿಯುತವಾಗಿ ಆಚರಿಸಿ ಮತ್ತು ಸ್ಮಾರ್ಟ್ ಆಯ್ಕೆಗಳನ್ನು ಮಾಡಿ ಎಂದು ಇದೇ ಹಾಡನ್ನು ಬಳಸಿಕೊಂಡು ಹೇಳಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read