BIG NEWS : ರಾಜ್ಯದ ಹಲವೆಡೆ ‘ಯೂರಿಯಾ ಗೊಬ್ಬರ’ ನೋ ಸ್ಟಾಕ್ : ರೈತರ ಆಕ್ರೋಶ, ಭುಗಿಲೆದ್ದ ಪ್ರತಿಭಟನೆ.!

ಬೆಂಗಳೂರು : ಸಕಾಲಕ್ಕೆ ಯೂರಿಯಾ ಗೊಬ್ಬರ ಸಿಗದೇ ಇರುವ ಹಿನ್ನೆಲೆ ರೈತರು ಕಂಗಲಾಗಿದ್ದು, ರಾಜ್ಯದ ಹಲವು ಕಡೆ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಹೌದು, ರಾಜ್ಯದಲ್ಲಿ ಬೇಡಿಕೆಗೆ ಅನುಗುಣವಾಗಿ ಯೂರಿಯಾ ಗೊಬ್ಬರ ಸಿಗದೇ ಇರುವುದರಿಂದ ರೈತರು ಕಂಗಾಲಾಗಿದ್ದು, ಪ್ರತಿಭಟನೆ ನಡೆಸಿದರು. ಕೃಷಿ ಕೆಲಸ ಬಿಟ್ಟು ಅಂಗಡಿಗಳಿಗೆ ಗೊಬ್ಬರ ಹುಡುಕಿಕೊಂಡು ಅಲೆದಾಡುವ ಸ್ಥಿತಿ ನಿರ್ಮಾಣ ವಾಗಿದೆ. ಗದಗ, ಹಾವೇರಿ, ಕೊಪ್ಪಳ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ತೀವ್ರ ಅಭಾವ ಸೃಷ್ಟಿಯಾಗಿದ್ದು, ನಿನ್ನೆ ಹಲವು ಕಡೆ ಪ್ರತಿಭಟನೆಗಳು ನಡೆದಿವೆ.

ಗದಗ ಜಿಲ್ಲೆ ಲಕ್ಷ್ಮೀಶ್ವರದಲ್ಲಿ ರೈತರು ಚಳಿ, ಮಳೆ ಲೆಕ್ಕಿಸದೆ ಕಾದು ಗೊಬ್ಬರ ಪಡೆದಿದ್ದಾರೆ.ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಗೊಬ್ಬರಕ್ಕಾಗಿ ಬೆಳಿಗ್ಗೆಯಿಂದಲೇ ರೈತರು ಸರದಿಯಲ್ಲಿ ನಿಂತಿದ್ದರು. ಗೊಬ್ಬರ ಕೊರತೆಯ ಕಾರಣ ಒಬ್ಬರಿಗೆ ಒಂದು ಬ್ಯಾಗ್ ಯೂರಿಯಾ ವಿತರಣೆ ಎಂದ ಕೂಡಲೇ ನೂಕು ನುಗ್ಗಲು ಆರಂಭವಾಯಿತು. ರೈತರು ಮತ್ತು ವಿತರಕರ ನಡುವೆ ಮಾತಿನ ಚಕಮಕಿ ನಡೆಯಿತು.

ಕರ್ನಾಟಕದ ರೈತರು ತೀವ್ರ ಯೂರಿಯಾ ಕೊರತೆಯನ್ನು ಎದುರಿಸುತ್ತಿದ್ದಾರೆ. ಏಪ್ರಿಲ್ ನಿಂದ ಜುಲೈ ವರೆಗೆ ನಮ್ಮ ಬೇಡಿಕೆಯಾದ 6.8 ಲಕ್ಷ ಮೆಟ್ರಿಕ್ ಟನ್ ಗೆ ಬದಲಾಗಿ, ಕೇಂದ್ರ ಸರ್ಕಾರ ಕೇವಲ 5.1 ಲಕ್ಷ ಮೆಟ್ರಿಕ್ ಟನ್ ಪೂರೈಸಿದೆ. ಆರಂಭಿಕ ಮಾನ್ಸೂನ್ ಮತ್ತು ವಿಸ್ತೃತ ಬೆಳೆ ವ್ಯಾಪ್ತಿಯು ಬೇಡಿಕೆಯನ್ನು ಹೆಚ್ಚಿಸಿದೆ, ರೈತರಲ್ಲಿ ಅಶಾಂತಿ ಸೃಷ್ಟಿಸಿದೆ. ನಮ್ಮ ರೈತರ ಹಿತಾಸಕ್ತಿಗಳನ್ನು ಕಾಪಾಡಲು 1.65 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಪೂರೈಕೆಯನ್ನು ತಕ್ಷಣವೇ ತ್ವರಿತಗೊಳಿಸುವಂತೆ ಜೆಪಿ ನಡ್ಡಾಗೆ ಸಿಎಂ ಪತ್ರ ಬರೆದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read