ಬಳ್ಳಾರಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಯಾವುದೇ ನಿಷೇಧಿತ ವಸ್ತುಗಳು, ಮೊಬೈಲ್ ನುಸುಳದಂತೆ ಕ್ರಮಕೈಗೊಳ್ಳಲಾಗಿದೆ ಎಂದು ಬಳ್ಳಾರಿ ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಆರ್.ಲತಾ ಅವರು ಸ್ಪಷ್ಟನೆ ನೀಡಿದ್ದಾರೆ.
ಬುಧವಾರದಂದು ಬಳ್ಳಾರಿ ಕೇಂದ್ರ ಕಾರಾಗೃಹದ ಕುರಿತು ಟಿ.ವಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾದ ದೃಶ್ಯಾವಳಿಗಳು ಪ್ರಸ್ತುತದ್ದಲ್ಲ ಹಾಗೂ ಕಾರಾಗೃಹದಿಂದ ಯಾವುದೇ ಸೆರೆಹಿಡಿದ ದೃಶ್ಯಾವಳಿಗಳು ವೈರಲ್ ಆಗಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಕಾರಾಗೃಹದಲ್ಲಿ ಹರ್ಷ ಕೊಲೆ ಕೇಸಿನ ಆರೋಪಿಗಳು ಇದ್ದು, ಅವರನ್ನು ಭದ್ರತೆ ದೃಷ್ಟಿಯಿಂದ ಹೊರವಿಶೇಷ ಭದ್ರತೆಯಲ್ಲಿರಿಸಲಾಗಿದೆ. ಬಂಧಿಗಳು ಬೇರೆ ಕಾರಾಗೃಹಕ್ಕೆ ವರ್ಗಾವಣೆ ಕೋರಿದ್ದು, ನ್ಯಾಯಾಲಯದಿಂದ ವರ್ಗಾವಣೆಯು ತಿರಸ್ಕರಿಸಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಬಂಧಿಗಳು ಕಾರಾಗೃಹದಲ್ಲಿ ಸಿಬ್ಬಂದಿಗಳ ಮೇಲೆ ಹಾಗೂ ಕಾರಾಗೃಹದ ಆಡಳಿತದ ವಿರುದ್ಧವಾಗಿ ವಿಡೀಯೋ ಹರಿಬಿಡುವುದಾಗಿ ಬೆದರಿಕೆ ಒಡ್ಡುತ್ತಿರುತ್ತಾರೆ.
ಕಾರಾಗೃಹದ ಕುರಿತು ಟಿವಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾದ ದೃಶ್ಯಾವಳಿಗಳಲ್ಲಿರುವ ಬಂಧಿಗಳು ಈಗಾಗಲೇ ಬಿಡುಗಡೆ ಹೊಂದಿದ್ದು, ಕಾರಾಗೃಹದಲ್ಲಿ ಪ್ರಸ್ತುತ ದಾಖಲಿರುವುದಿಲ್ಲ. ಆ ದೃಶ್ಯಾವಳಿಗಳು ತುಂಬಾ ಹಳೆಯದಾಗಿದ್ದು, ಅವುಗಳನ್ನು ಬಳಸಿ ಹರಿಬಿಟ್ಟಿರುವುದು ಕಂಡುಬAದಿದೆ. ಪ್ರಸ್ತುತ ಅವು ಈಗಿನ ದೃಶ್ಯಾವಳಿಗಳಾಗಿರುವುದಿಲ್ಲ.
ಬುಧವಾರ ಟಿ.ವಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾದ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪ್ರಸ್ತುತ ದಿನಗಳ ದೃಶ್ಯಾವಳಿಗಳಾಗಿರುವುದಿಲ್ಲ. ಇದು ಬಂಧಿಗಳು ಆಡಳಿತದ ವಿರುದ್ಧ ಹಾಗೂ ಸಿಬ್ಬಂದಿಗಳ ಮನಸ್ಥೆರ್ಯ ಕುಗ್ಗಿಸಲು ಮಾಡಿರುವ ತಂತ್ರವಾಗಿದೆ ಎಂದು ಅಧೀಕ್ಷಕರಾದ ಆರ್.ಲತಾ ಅವರು ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.