BREAKING: ಮತ್ತೆ I.N.D.I.A ಮೈತ್ರಿಕೂಟ ಸೇರಲಿದ್ದರಾ ನಿತೀಶ್ ? ಕುತೂಹಲ ಹುಟ್ಟುಹಾಕಿದೆ ಈ ‘ಪೋಸ್ಟ್’

ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್‌ಡಿಎ ಬಣವು 2024 ರ ಲೋಕಸಭಾ ಚುನಾವಣೆಯಲ್ಲಿ 300 ಸ್ಥಾನಗಳ ಗಡಿ ದಾಟಲು ಹೆಣಗಾಡುತ್ತಿದ್ದು, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ I.N.D.I.A ಕೂಟಕ್ಕೆ ಮರಳಬಹುದು ಎಂಬ ಊಹಾಪೋಹಗಳು ಹರಡಿವೆ.

ಸಮಾಜವಾದಿ ಪಕ್ಷದ ಐಪಿ ಸಿಂಗ್ ಅವರ ಪೋಸ್ಟ್ ಇಂತಹ ಚರ್ಚೆ ಹುಟ್ಟುಹಾಕಿದೆ. ಪೋಸ್ಟ್ ನಲ್ಲಿ ಐಪಿ ಸಿಂಗ್, “ನಿತೀಶ್ ನಮ್ಮವರಾಗಿದ್ದರು, ನಮ್ಮವರಾಗಿದ್ದಾರೆ, ಮತ್ತು ನಮ್ಮವರಾಗಿ ಉಳಿಯುತ್ತಾರೆ. ಸೀತಾರಾಮ್‌ಗೆ ಜಯವಾಗಲಿ” ಎಂದು ಹೇಳಿದ್ದಾರೆ. ಎನ್ ಡಿ ಎ ಕೂಟದಲ್ಲಿರುವ ನಿತೀಶ್ ಕುಮಾರ್ ಅವರನ್ನು ಕಾಂಗ್ರೆಸ್ ಸೆಳೆಯಲು ಮುಂದಾಗಿದೆಯಾ ಎಂಬ ಪ್ರಶ್ನೆ ಉದ್ಭವಿಸಿದೆ.

ಕಾಂಗ್ರೆಸ್ ನಾಯಕತ್ವವು ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಜನತಾ ದಳ (ಯುನೈಟೆಡ್) (ಜೆಡಿಯು) ನಾಯಕತ್ವದೊಂದಿಗೆ ಸಂಪರ್ಕದಲ್ಲಿದೆ ಎಂದು ಮೂಲಗಳಿಂದ ಗೊತ್ತಾಗಿದೆ. ನಿತೀಶ್‌ ಕುಮಾರ್‌ಗೆ ‘ಇಂಡಿ’ ಮೈತ್ರಿಕೂಟ ಉಪ ಪ್ರಧಾನಿ ಹುದ್ದೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ ಮತ್ತು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಆಫರ್ ಮಾಡಲಾಗಿದೆ ಎನ್ನಲಾಗಿದೆ.

ಈ ವರ್ಷದ ಆರಂಭದಲ್ಲಿ, ನಿತೀಶ್ ಕುಮಾರ್ I.N.D.I.A ಬಿಟ್ಟು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಗೆ ಮರಳಿ ಬಿಹಾರದ ಮುಖ್ಯಮಂತ್ರಿಯಾದರು. ಲೋಕಸಭಾ ಚುನಾವಣೆಯ ಮತ ಎಣಿಕೆಯ ನಡುವೆ ನಿತೀಶ್ ಕುಮಾರ್ ಅವರ ಜನತಾ ದಳ (ಯುನೈಟೆಡ್) ಬಿಹಾರದಲ್ಲಿ ಕಿಂಗ್‌ಪಿನ್ ಆಗಿ ಹೊರಹೊಮ್ಮಿದೆ. ಬಿಹಾರದ 40 ಸಂಸದರ ಸ್ಥಾನದಲ್ಲಿ ಸದ್ಯ ಜೆಡಿಯು ಮತ್ತು ಅದರ ಮಿತ್ರ ಪಕ್ಷವಾದ ಭಾರತೀಯ ಜನತಾ ಪಕ್ಷವು ತಲಾ 12 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

https://twitter.com/IPSinghSp/status/1797885226804449491/photo/1

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read