ನಿಸ್ಸಾನ್ ಮ್ಯಾಗ್ನೈಟ್ ಗೆಜ಼ಾ: ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ

ನಿಸ್ಸಾನ್ ಮ್ಯಾಗ್ನೈಟ್‌ನ ಕೆಳ ಸ್ತರದ ಅವತಾರವಾದ ಮ್ಯಾಗ್ನೈಟ್ ಗೆಜ಼ಾ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಆರಂಭಿಕ ಬೆಲೆ 7.39 ಲಕ್ಷ (ಎಕ್ಸ್‌ಶೋ ರೂಂ) ಎಂದು ನಿಗದಿ ಪಡಿಸಲಾಗಿದೆ.

ಜೆಬಿಎಲ್ ಸೌಂಡ್ ವ್ಯವಸ್ಥೆಯೊಂದಿಗೆ, ಇನ್ಫೋಟೇನ್ಮೆಂಟ್ ವ್ಯವಸ್ಥೆ, ಬಿಗ್ ಕುಶನ್‌ಗಳು, ಹಿಂಬದಿ ವ್ಯೂ ಕ್ಯಾಮೆರಾ ಸೇರಿದಂತೆ ಅನೇಕ ಸುಧಾರಣೆಗಳನ್ನು ಈ ಮಾಡೆಲ್‌ನಲ್ಲಿ ತರಲಾಗಿದೆ.

ಈ ವಿಶೇಷ ಎಡಿಷನ್ ಕೇವಲ 72PS ಮತ್ತು 96PS 1-ಲೀಟರ್‌ ಪೆಟ್ರೋಲ್ ಇಂಜಿನ್‌ನ ಆಯ್ಕೆಯಲ್ಲಿ ಮಾತ್ರವೇ ಸಿಗಲಿದೆ. 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ ಸಿಟಿ ಗೇರ್‌ಬಾಕ್ಸ್‌ನ ಆಯ್ಕೆಗಳು ಸಹ ಗೆಜ಼ಾದಲ್ಲಿ ಇವೆ.

ಬೇಸ್ XL ಮಾಡೆಲ್‌ಗಿಂತ ಹೆಚ್ಚಿನ ಸುಧಾರಣೆಗಳನ್ನು ಮೇಲ್ಕಂಡ ವ್ಯವಸ್ಥೆಗಳ ಮೂಲಕ ನಿಸ್ಸಾನ್ ಮ್ಯಾಗ್ನೈಟ್‌ಗೆ ಮಾಡಲಾಗಿದೆ. XL ವೇರಿಯೆಂಟ್‌ಗಿಂತ ಗೆಜ಼ಾ ವೇರಿಯೆಂಟ್‌ ಬೆಲೆ 35,000 ನಷ್ಟು ಹೆಚ್ಚಿದೆ.

ಇವುಗಳೊಂದಿಗೆ ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ, ಸುಧಾರಿತ ಬೆಳಕಿನ ವ್ಯವಸ್ಥೆ, ಆಪ್-ಆಧರಿತ ನಿಯಂತ್ರಣಗಳು ಹಾಗೂ ಶಾರ್ಕ್ ಫಿನ್ ಆಂಟೆನಾ ಸಹ ಈ ಕಾರಿನಲ್ಲಿ ಇವೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read