BIG NEWS: ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಅಚ್ಚರಿಯೇನಲ್ಲ: ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ಸಿ.ಪಿ.ಯೋಗೇಶ್ವರ್ ಅವರು ಯಾವಾಗ ಬಿಜೆಪಿ ಪರಿಷತ್ ಸ್ಥಾನಕ್ಕೆ ತರಾತುರಿಯಲ್ಲಿ ರಾಜೀನಾಮೆ ಕೊಟ್ಟರೋ ಆಗಲೇ ರಾಜಕೀಯ ವಿದ್ಯಮಾನಗಳ ಬೆಳವಣಿಗೆ ಬಗ್ಗೆ ಬುದ್ಧಿವಂತರು ಅರ್ಥಮಾಡಿಕೊಳ್ಳಬೇಕು. ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ನಿರೀಕ್ಷಿತ ಎಂದು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗಿರುವುದರಲ್ಲಿ ಅಚ್ಚರಿಯೇನಿಲ್ಲ ಎಂದು ಹೇಳಿದರು.

ಚನ್ನಪಟ್ಟಣ ಕ್ಷೇತ್ರಕ್ಕೆ ನನ್ನ ಹೆಸರು ಕಳೆದ ಎರಡು ತಿಂಗಳಿಂದ ಕೇಳಿಬರ್ತಿದೆ. ಕಾರ್ಯಕರ್ತರು ನಾನು ಸ್ಪರ್ಧೆ ಮಾಡಿದರೆ ನನ್ನ ಪರ ಕೆಲಸಮಾಡುವುದಾಗಿ ಹೇಳಿದ್ದಾರೆ. ಚನ್ನಪಟ್ಟಣದಲ್ಲಿ ಸ್ಪರ್ಧೆ ಧೈರ್ಯದ ಪ್ರಶ್ನೆ ಅಲ್ಲ. ಯಾವುದೇ ಸ್ಪರ್ಧೆ ಅಂತಿಮವಾಗಿ ಆಗಬೇಕಾದರೆ ಎನ್ ಡಿಎ ಕಡೆಯಿಂದ ಘೋಷಣೆಯಾಗಬೇಕು. ಹಾಗಾಗಿ ತಾಳಿದವನು ಬಾಳಿಯಾನು ಎಂದು ಕುಮಾರಸ್ವಾಮಿ ಕೂಡ ಹೇಳಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಅಭ್ಯರ್ಥಿ ಬಗ್ಗೆ ಚರ್ಚೆ ನಡೆಸಿದ್ದಾರೆ. ಚನ್ನಪಟ್ಟಣಕ್ಕೆ ಅಭ್ಯರ್ಥಿ ಯಾರೆಂದು ಎನ್ ಡಿಎ ಘೋಷಣೆ ಮಾಡಲಿದೆ ಎಂದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read