ವಾಹನ ಸವಾರರಿಗೆ ಗುಡ್ ನ್ಯೂಸ್: ಹೆದ್ದಾರಿ ಸುರಕ್ಷತೆ, ಗಸ್ತು ಸೇವೆ ಬಲಪಡಿಸಲು NHAIನಿಂದ ‘ರಾಜಮಾರ್ಗ್ ಸಾಥಿ’

ನವದೆಹಲಿ: ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಹೆದ್ದಾರಿ ಗಸ್ತು ವ್ಯವಸ್ಥೆಯನ್ನು ಬಲಪಡಿಸಲು ಹೆದ್ದಾರಿಗಳಲ್ಲಿ ‘ರಾಜಮಾರ್ಗ್ ಸಾಥಿ’ ಎಂಬ ಹೆಸರಿನ ಹೊಸ ರೂಟ್ ಪೆಟ್ರೋಲಿಂಗ್ ವಾಹನಗಳನ್ನು ನಿಯೋಜಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI) ಯೋಜಿಸಿದೆ.

ಈ ವಾಹನಗಳು ಸುಧಾರಿತ ಸಂವಹನ ಮತ್ತು ಸುರಕ್ಷತಾ ಸಾಧನಗಳನ್ನು ಹೊಂದಿದ್ದು, ಟ್ರಾಫಿಕ್ ಅಡೆತಡೆಗಳನ್ನು ಕಡಿಮೆ ಮಾಡಲು ಮತ್ತು ರಸ್ತೆ ಸುರಕ್ಷತೆಯನ್ನು ಸುಧಾರಿಸಲು ಉಪಯುಕ್ತವಾಗಿದೆ.

‘AI ವಿಡಿಯೋ ಅನಾಲಿಟಿಕ್ಸ್’ ಸುಸಜ್ಜಿತ ಕ್ಯಾಮರಾವು ರಸ್ತೆಯಲ್ಲಿ ಬಿರುಕುಗಳು ಮತ್ತು ಗುಂಡಿಗಳು, ವಾಹನಗಳು, ಪಾದಚಾರಿಗಳು, ರಸ್ತೆ ಚಿಹ್ನೆಗಳು ಮತ್ತು ಇತರ ಮೂಲಸೌಕರ್ಯ ಸ್ವತ್ತುಗಳನ್ನು ಒಳಗೊಂಡಂತೆ ಇತರ ಅಂಶಗಳನ್ನು ಸೆರೆಹಿಡಿಯುತ್ತದೆ. ಇವನ್ನು ಗುರುತಿಸಿ ತಕ್ಷಣದ ಕ್ರಮಕ್ಕೆ ಸೂಚಿಸಲಾಗುವುದು ಎನ್ನಲಾಗಿದೆ.

‘ರಾಜಮಾರ್ಗ್ ಸಾಥಿ’ ಹೆಸರಿನ ಹೊಸ ಮಾರ್ಗ ಗಸ್ತು ವಾಹನಗಳು ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಹೆದ್ದಾರಿ ಗಸ್ತು ತಿರುಗುವಿಕೆಯನ್ನು ಬಲಪಡಿಸಲು ಸಹಕಾರಿಯಾಗಲಿವೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read