ಕೆಟ್ಟು ಹೋದ ಲಿಫ್ಟ್​: ತಮ್ಮದೇ ಆರತಕ್ಷತೆಗೆ ಹೋಗಲಾಗದೇ ಪೇಚಾಡಿದ ಜೋಡಿ

ನವವಿವಾಹಿತರು ಎರಡು ಗಂಟೆಗಳ ಕಾಲ ಲಿಫ್ಟ್‌ನಲ್ಲಿ ಸಿಲುಕಿದ ನಂತರ ತಮ್ಮದೇ ಆದ ಮದುವೆಯ ಆರತಕ್ಷತೆಯನ್ನು ತಪ್ಪಿಸಿಕೊಂಡರು. ಉತ್ತರ ಕೆರೊಲಿನಾದ ವಿಕ್ಟೋರಿಯಾ ಮತ್ತು ಪನವ್ ಝಾ ಅವರು ತಮ್ಮ ಆರತಕ್ಷತೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದರು, ಇದು ಗ್ರ್ಯಾಂಡ್ ಬೋಹೀಮಿಯನ್ ಹೋಟೆಲ್‌ನ 16 ನೇ ಮಹಡಿಯಲ್ಲಿತ್ತು, ಅವರ ಲಿಫ್ಟ್ ನೆಲ ಮಹಡಿ ಮತ್ತು ಮೊದಲ ಮಹಡಿಯ ನಡುವೆ ಸಿಲುಕಿಕೊಂಡಿತು.

ರಕ್ಷಣಾ ಸೇವೆಗಳು ಲಿಫ್ಟ್ ಅನ್ನು ಸರಿಪಡಿಸಲು ಪ್ರಯತ್ನಿಸಿದವು. ಆದರೆ ನಂತರ ಅಗ್ನಿಶಾಮಕ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಲಾಯಿತು. ಅಂತೂ ಅವರನ್ನು ಹೊರಕ್ಕೆ ತೆಗೆಯಲಾಯಿತು. ವಧು ಮತ್ತು ವರನ ಜೊತೆಗೆ, ವಿಕ್ಟೋರಿಯಾಳ ಸಹೋದರಿ ಸೇರಿದಂತೆ ನಾಲ್ಕು ಇತರ ಅತಿಥಿಗಳು ಸಿಲುಕಿಕೊಂಡರು.

ಅಗ್ನಿಶಾಮಕ ಸಿಬ್ಬಂದಿ ಬಂದಾಗಲೂ ಲಿಫ್ಟ್​ ಸರಿ ಮಾಡಲು ಹರಸಾಹಸ ಪಡಬೇಕಾಗಿ ಬಂತು. ಇವೆಲ್ಲಾ ಆಗುವಷ್ಟರಲ್ಲಿ ಮುಹೂರ್ತ ಮೀರಿ ಹೋಗಿತ್ತು. ಅತಿಥಿಗಳು ನವ ಜೋಡಿಗಾಗಿ ಕಾದೂ ಕಾದೂ ಸುಸ್ತಾಗಿ ಹೋದರು. ಲಿಫ್ಟ್​ ಒಳಗೆ ಸಿಗ್ನಲ್​ ಕೂಡ ಇರದ ಕಾರಣ, ಸಂಪರ್ಕ ಕೂಡ ಸಾಧ್ಯವಾಗಿರಲಿಲ್ಲ. ಅಂತೂ ಕೆಲ ಗಂಟೆಗಳ ಬಳಿಕ ವಿಷಯ ಕೇಳಿ ಎಲ್ಲರೂ ಸುಸ್ತಾದರು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read