ಆರತಕ್ಷತೆಗೂ ಮುನ್ನ ನವದಂಪತಿ ಶವವಾಗಿ ಪತ್ತೆ

ಮದುವೆಯ ಆರತಕ್ಷತೆಗೆ ಮುನ್ನ ನವವಿವಾಹಿತ ದಂಪತಿಗಳು ತಮ್ಮ ಮನೆಯ ಕೊಠಡಿಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ನಡೆದಿದೆ.

ನವದಂಪತಿ ದೇಹದ ಮೇಲೆ ಇರಿತದ ಗಾಯಗಳೊಂದಿಗೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರ ನಡುವೆ ಜಗಳ ನಡೆದಿದ್ದು, ಬಳಿಕ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.

ಮಂಗಳವಾರ ತಡರಾತ್ರಿ ತಿಕ್ರಪಾರ ಪೊಲೀಸ್ ಠಾಣೆ ವ್ಯಾಪ್ತಿಯ ಬ್ರಿಜ್‌ನಗರದಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಸ್ಲಾಂ (24) ಮತ್ತು ಕಹ್ಕಶಾ ಬಾನೊ (22) ಭಾನುವಾರ ವಿವಾಹವಾಗಿದ್ದು, ಮಂಗಳವಾರ ರಾತ್ರಿ ಅವರ ವಿವಾಹ ಆರತಕ್ಷತೆ ನಡೆಯಬೇಕಿತ್ತು. ಅವರು ತಮ್ಮ ಕೊಠಡಿಯೊಳಗೆ ಆರತಕ್ಷತೆಗೆ ತಯಾರಾಗುತ್ತಿದ್ದಾಗ ವರನ ತಾಯಿ ವಧುವಿನ ಕಿರುಚಾಟವನ್ನು ಕೇಳಿ ಅಲ್ಲಿಗೆ ಧಾವಿಸಿದರು ಎಂದು ಪೊಲೀಸರು ಹೇಳಿದರು.

“ಕೋಣೆಯ ಒಳಗಿನಿಂದ ಚಿಲಕ ಹಾಕಲಾಗಿತ್ತು. ಒಳಗಿದ್ದ ನವ ದಂಪತಿ ಪ್ರತಿಕ್ರಿಯಿಸದಿದ್ದಾಗ, ಕುಟುಂಬದ ಸದಸ್ಯರು ಕಿಟಕಿಯ ಮೂಲಕ ಇಣುಕಿ ನೋಡಿದಾಗ ಅವರು ರಕ್ತದ ಮಡುವಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಅವರು ಪೊಲೀಸರಿಗೆ ಮಾಹಿತಿ ನೀಡಿದರು” ಎಂದು ಅವರು ಹೇಳಿದರು.

ಪೊಲೀಸರು ಬಾಗಿಲು ಒಡೆದು ಒಳನುಗ್ಗಿ ಅವರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು, ಸ್ಥಳದಿಂದ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ.

”ದಂಪತಿಗಳ ನಡುವೆ ವಾಗ್ವಾದ ನಡೆದಿದ್ದು, ಪತಿ ಪತ್ನಿಗೆ ಚಾಕುವಿನಿಂದ ಹಲ್ಲೆ ನಡೆಸಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ” ಎಂದು ಅವರು ಹೇಳಿದ್ದಾರೆ. ಆದಾಗ್ಯೂ, ಈ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read