ಮೊದಲ ರಾತ್ರಿಯೇ ಆಘಾತಕಾರಿ ಘಟನೆ: ಸಂಭ್ರಮದಲ್ಲಿದ್ದ ವಧು, ವರರಿಗೆ ಅದೇನಾಯ್ತು…?

ಬಹ್ರೈಚ್: ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಕೈಸರ್‌ಗಂಜ್ ನಲ್ಲಿ ಮೊದಲ ರಾತ್ರಿಯೇ ವಧು, ವರ ನಿಗೂಢವಾಗಿ ಸಾವನ್ನಪ್ಪಿದ್ದಾರೆ,

ಮೊದಲ ರಾತ್ರಿಗೆಂದು ರೂಮ್ ಸೇರಿಕೊಂಡಿದ್ದ ವಧು, ವರ ಮರುದಿನ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. 23 ವರ್ಷದ ಪ್ರತಾಪ್ ಮತ್ತು ಆತನ ಪತ್ನಿ ಪುಷ್ಪಾ ಮೃತಪಟ್ಟ ನವ ದಂಪತಿ. ಮೇ 30ರಂದು ಬಂಧು ಬಳಗದವರ ಸಮ್ಮುಖದಲ್ಲಿ ಮದುವೆಯಾಗಿದ್ದು, ಮೇ 31 ರಂದು ಮೊದಲ ರಾತ್ರಿ ಸಂಭ್ರಮದಲ್ಲಿ ರೂಮ್ ಸೇರಿಕೊಂಡಿದ್ದ ದಂಪತಿ ಮರುದಿನ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.

ಇಬ್ಬರನ್ನು ರೂಮ್ ಗೆ ಕಳುಹಿಸಿದ ನಂತರ ಸಂಬಂಧಿಕರು ನಿದ್ದೆಗೆ ಜಾರಿದ್ದಾರೆ. ಬೆಳಗ್ಗೆ ಬಹು ಹೊತ್ತಿನವರೆಗೂ ನವದಂಪತಿ ಬಾಗಿಲು ತೆರೆದಿಲ್ಲ. ಬಾಗಿಲು ಬಡಿದ ನಂತರ ಅನುಮಾನದ ಮೇಲೆ ಕಿಟಕಿಯಿಂದ ನೋಡಿದಾಗ ಇಬ್ಬರು ಹಾಸಿಗೆ ಮೇಲೆ ಬಿದ್ದಿರುವುದು ಪತ್ತೆಯಾಗಿದೆ. ಕೂಡಲೇ ಬಾಗಿಲು ಒಡೆದು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಈ ವೇಳೆಗಾಗಲೇ ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ಪರೀಕ್ಷಿಸಿದ ವೈದ್ಯರು ತಿಳಿಸಿದ್ದಾರೆ.

ನವದಂಪತಿ ನಿಗೂಢ ಸಾವಿನ ಕುರಿತು ಅನುಮಾನ ವ್ಯಕ್ತವಾಗಿದೆ. ಕುಟುಂಬದವರು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಪ್ರಭಾರಿ ಇನ್ಸ್ಪೆಕ್ಟರ್ ರಾಜನಾಥ್ ಸಿಂಗ್ ಮತ್ತು ಪೊಲೀಸ್ ಅಧಿಕಾರಿ ಕಮಲೇಶ್ ಸಿಂಗ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಮತ್ತು ಮರಣೋತ್ತರ ಪರೀಕ್ಷೆಯ ವರದಿ ನಂತರ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read