ಕಾರಿನ ಚಕ್ರಕ್ಕೆ ಬಟ್ಟೆ ಸಿಲುಕಿ ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಯ ಭೀಕರ ಸಾವು

ನವದೆಹಲಿ: ಸ್ಕೂಟರ್​ನಲ್ಲಿ ಹೋಗುತ್ತಿದ್ದ ಯುವತಿಯ ಬಟ್ಟೆ ಪಕ್ಕದಲ್ಲಿ ಬರುತ್ತಿದ್ದ ಕಾರಿನ ಚಕ್ರಕ್ಕೆ ಸಿಲುಕಿ ಅಪಘಾತವಾಗಿರುವ ಭಯಾನಕ ಘಟನೆ ದೆಹಲಿಯಲ್ಲಿ ನಡೆದಿದೆ. ಆಯತಪ್ಪಿ ಬಿದ್ದ ಯುವತಿಯ ಬಟ್ಟೆ ಚಕ್ರಕ್ಕೆ ಸಿಲುಕಿದ್ದರಿಂದ ಅದರ ಅರಿವು ಇಲ್ಲದ ಕಾರು ಚಾಲಕ ಕಾರನ್ನು ಚಾಲನೆ ಮಾಡುತ್ತಲೇ ಸಾಗಿದ್ದರಿಂದ ಯುವತಿ ನೋವಿನಲ್ಲಿ ಮೃತಪಟ್ಟಿದ್ದಾಳೆ.

ಕೆಲವು ಕಿಲೋಮೀಟರ್‌ಗಳವರೆಗೆ ಯುವತಿಯನ್ನು ಕಾರು ಎಳೆದುಕೊಂಡು ಹೋಗಿದೆ. ಬಟ್ಟೆ ಸಂಪೂರ್ಣ ಚಕ್ರಕ್ಕೆ ಸಿಲುಕಿದೆ. ಬೆತ್ತಲೆ ದೇಹವನ್ನು ನೋಡಿದ್ದ ಸ್ಥಳೀಯರು ಆಕೆಯ ಮೇಲೆ ಅತ್ಯಾಚಾರ ಎಸಗಿ ಎಸೆದು ಹೋಗಲಾಗಿದೆ ಎಂದು ಭಾವಿಸಿದ್ದರು. ಪೊಲೀಸರು ಕೂಡ ಹಾಗೆಯೇ ಭಾವಿಸಿದ್ದರು. ಆದರೆ ಇದೀಗ ನಿಜ ಸಂಗತಿ ಬಯಲಾಗಿದೆ.

ಬೆಳಗಿನ ಜಾವ 3:24ರ ಸುಮಾರಿಗೆ ತಮಗೆ ಈ ವಿಚಾರವಾಗಿ ಕರೆ ಬಂದಿತ್ತು. ಯುವತಿ ಶವವನ್ನು ಬಲೆನೋ ಕಾರಿಗೆ ಕಟ್ಟಿ ಎಳೆದೊಯ್ಯಲಾಗುತ್ತಿದೆ ಎಂದು ಕರೆ ಮಾಡಿದವರು ತಿಳಿಸಿದ್ದರು. ನಂತರ ಹೋಗಿ ನೋಡಿ ತನಿಖೆ ಕೈಗೊಂಡಾಗ ನಿಜಾಂಶ ತಿಳಿದು ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೊಸ ವರ್ಷದಲ್ಲಿಯೇ ಈ ಆಘಾತಕಾರಿ ಘಟನೆ ನಡೆದಿರುವುದಾಗಿ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read