BIG NEWS: ಸಿಂಗಾಪುರದಲ್ಲಿ ಹೊಸ ರೂಪದೊಂದಿಗೆ ಮತ್ತೆ ಬಂದ ಕೊರೊನಾ; ಒಂದೇ ವಾರದಲ್ಲಿ 25,000ಕ್ಕೂ ಅಧಿಕ ಕೇಸ್

2020 ರಲ್ಲಿ ಜಗತ್ತಿನಾದ್ಯಂತ ದೊಡ್ಡ ಅನಾಹುತ ಸೃಷ್ಟಿಸಿದ್ದ ಕೋವಿಡ್ – 19 ಅಲೆ ಸಿಂಗಾಪುರದಲ್ಲಿ ಮತ್ತೆ ಹೊಸ ರೂಪದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದೆ. ಮೇ 5 ರಿಂದ 11 ರವರೆಗೆ 25,900 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಮತ್ತೆ ಮಾಸ್ಕ್ ಧರಿಸುವಂತೆ ಆರೋಗ್ಯ ಸಚಿವ ಓಂಗ್ ಯೆ ಕುಂಗ್ ಜನತೆಗೆ ಸಲಹೆ ನೀಡಿದ್ದಾರೆ.

“ನಾವು ಹೊಸ ಅಲೆಯ ಆರಂಭಿಕ ಹಂತದಲ್ಲಿದ್ದೇವೆ. ದಿನೇ ದಿನೇ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ ಮುಂದಿನ ಎರಡರಿಂದ ನಾಲ್ಕು ವಾರಗಳಲ್ಲಿ ಅಲೆಯು ಉತ್ತುಂಗಕ್ಕೇರುತ್ತದೆ ಎಂದು ಊಹಿಸಲಾಗಿದೆ. ಅಂದರೆ ಜೂನ್ ಮಧ್ಯ ಮತ್ತು ಅಂತ್ಯದ ನಡುವೆ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ” ಎಂದು ಸಚಿವ ಓಂಗ್ ಯೆ ಕುಂಗಾ ಹೇಳಿದ್ದಾರೆಂದು ದಿ ಸ್ಟ್ರೈಟ್ಸ್ ಟೈಮ್ಸ್ ಉಲ್ಲೇಖಿಸಿದೆ.

ಮೇ 5 ಕ್ಕೂ ಮುನ್ನ ಇದ್ದ 13,700 ಕೊರೊನಾ ಪ್ರಕರಣಗಳು ಮೇ 11ಕ್ಕೆ 25,900 ಪ್ರಕರಣಗಳಿಗೆ ಏರಿದೆ . ಸರಾಸರಿ ಪ್ರತಿದಿನ 181 ರಿಂದ ಸುಮಾರು 250 ಮಂದಿ ಕೋವಿಡ್ 19 ನಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಆದರೆ ತೀವ್ರ ನಿಗಾ ಘಟಕಕ್ಕೆ ಸೇರುವವರ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಆಸ್ಪತ್ರೆಯಲ್ಲಿ ಬೆಡ್ ಸಾಮರ್ಥ್ಯ ಹೆಚ್ಚಿಸಲು, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ತೀರ ಗಂಭೀರ ಸ್ಥಿತಿಯಲ್ಲಿಲ್ಲದ ರೋಗಿಗಳಿಗೆ ಮನೆಯಲ್ಲೇ ಚಿಕಿತ್ಸೆ ಪಡೆಯಲು ಸೂಚಿಸಲಾಗಿದೆ.

60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳು, ವೈದ್ಯಕೀಯವಾಗಿ ದುರ್ಬಲ ವ್ಯಕ್ತಿಗಳು, ತೀವ್ರತರವಾದ ಕಾಯಿಲೆಯ ಅಪಾಯದಲ್ಲಿರುವವರು, ಕಳೆದ 12 ತಿಂಗಳುಗಳಲ್ಲಿ ಕೊರೊನಾ ಲಸಿಕೆ ತೆಗೆದುಕೊಂಡಿರದಿದ್ದಲ್ಲಿ, ಹೆಚ್ಚುವರಿಯಾಗಿ ಕೋವಿಡ್ ಲಸಿಕೆ ತೆಗೆದುಕೊಳ್ಳುವಂತೆ ಆರೋಗ್ಯ ಸಚಿವರು ಒತ್ತಾಯಿಸಿದ್ದಾರೆ.

ಕೋವಿಡ್ ಪ್ರಕರಣಗಳು ಒಮ್ಮೆ ದ್ವಿಗುಣಗೊಂಡರೆ ಸಿಂಗಾಪುರ ಅದನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ. ಆದರೆ ಪ್ರಕರಣಗಳು ಪ್ರತಿ ದಿನ ದ್ವಿಗುಣಗೊಳ್ಳುತ್ತಾ ಹೋದರೆ ಆಸ್ಪತ್ರೆ ವ್ಯವಸ್ಥೆಗೆ ಗಣನೀಯ ಹೊರೆಯಾಗಲಿದೆ ಎಂದು ಆರೋಗ್ಯ ಸಚಿವರು ಪರಿಸ್ಥಿತಿಯ ಬಗ್ಗೆ ಗಮನಸೆಳೆದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read