ಅಯೋಧ್ಯೆಯಲ್ಲಿ ಹೊಸ ಬಾಲರಾಮ ವಿರಾಜಮಾನ; ಹಳೆ ವಿಗ್ರಹ ಎಲ್ಲಿರಲಿದೆ ಗೊತ್ತಾ ? ಇಲ್ಲಿದೆ ಮಾಹಿತಿ

ರಾಮಮಂದಿರದ ಉದ್ಘಾಟನಾ ಸಮಾರಂಭದ ಬಳಿಕ ಅಯೋಧ್ಯೆ ಇಡೀ ಜಗತ್ತಿನ ಕಣ್ಸೆಳೆಯುತ್ತಿದೆ. ಸುಂದರವಾದ ರಾಮಲಲ್ಲಾನ ಹೊಸ ವಿಗ್ರಹವನ್ನು ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದೆ. ಆದರೆ ಹಳೆಯ ವಿಗ್ರಹವನ್ನು ಏನು ಮಾಡುತ್ತಾ ರೆ? ಅದು ಈಗ ಯಾವ ಸ್ಥಿತಿಯಲ್ಲಿದೆ ಅನ್ನೋ ಪ್ರಶ್ನೆ ಅನೇಕರನ್ನು ಕಾಡಬಹುದು. 1949ರ ಡಿಸೆಂಬರ್ 22ರ ರಾತ್ರಿ ಬಾಬರಿ ಮಸೀದಿಯೊಳಗೆ ವಿಗ್ರಹ ಕಾಣಿಸಿಕೊಂಡಾಗಿನಿಂದಲೂ ಇದೊಂದು ತಾತ್ಕಾಲಿಕ ಡೇರೆಯಲ್ಲಿದೆ.

ಬಾಬರಿ ಮಸೀದಿಯಲ್ಲಿ ರಾಮನ ವಿಗ್ರಹವು ನಿಗೂಢವಾಗಿ ಕಾಣಿಸಿಕೊಂಡಿದೆ ಎಂಬುದು ಭಕ್ತರ ಮಾತು. ಹಾಗಾಗಿಯೇ ಆ ಸ್ಥಳದಲ್ಲಿ ಧಾರ್ಮಿಕ ಭಾವನೆಗಳು ತೀವ್ರ ಸ್ವರೂಪ ಪಡೆದವು. ಈ ಸಂಗತಿ ದಶಕಗಳ ಕಾಲ ಕಾನೂನು ಹೋರಾಟಕ್ಕೆ ಸಹ ಕಾರಣವಾಯಿತು.

ಅಯೋಧ್ಯೆಯಲ್ಲಿ ನಡೆದ ಭವ್ಯವಾದ ‘ಪ್ರಾಣ ಪ್ರತಿಷ್ಠಾ’ ಸಮಾರಂಭದಲ್ಲಿ ಮೈಸೂರು ಮೂಲದ ಕಲಾವಿದ ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿದ ಹೊಸ ವಿಗ್ರಹವನ್ನು ದೇವಾಲಯದ ಗರ್ಭಗುಡಿಯಲ್ಲಿ ಇರಿಸಲಾಗಿದೆ. ಕಪ್ಪು ಕಲ್ಲಿನಿಂದ ಕೆತ್ತಿದ 51 ಇಂಚಿನ ವಿಗ್ರಹವು ಅತ್ಯಂತ ತೇಜೋಮಯವಾಗಿದೆ.

ಹಳೆಯ ವಿಗ್ರಹವನ್ನು ಕೂಡ ಹೊಸ ದೇವಾಲಯಕ್ಕೆ ಸ್ಥಳಾಂತರಿಸಲಾಗುತ್ತದೆ. ಅದನ್ನು ಸಹ ಸಿಂಹಾಸನದ ಮೇಲೆ ಇರಿಸಲಾಗುತ್ತದೆ ಎಂದು ಅರ್ಚಕರು ಮಾಹಿತಿ ನೀಡಿದ್ದಾರೆ. ಹೊಸ ರಾಮಲಲ್ಲಾ ವಿಗ್ರಹದ ಎದುರಲ್ಲೇ ಸಿಂಹಾಸನದ ಮೇಲೆ ಹಳೆಯ ವಿಗ್ರಹವನ್ನು ಕುಳ್ಳಿರಿಸಲಾಗುತ್ತದೆ. ಕೆಲವು ಧಾರ್ಮಿಕ ಕ್ರಿಯೆಗಳ ನಂತರ ಅರ್ಚಕರು ತಾತ್ಕಾಲಿಕ ಗುಡಾರದಿಂದ ದೇವಸ್ಥಾನಕ್ಕೆ ವಿಗ್ರಹವನ್ನು ಸ್ಥಳಾಂತರಿಸಲಿದ್ದಾರೆ.

70 ಎಕರೆ ಸಂಕೀರ್ಣದಲ್ಲಿ 2.67 ಎಕರೆ ಪ್ರದೇಶದಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ. ಸದ್ಯ ಮೊದಲ ಹಂತ ಮಾತ್ರ ಸಿದ್ಧವಾಗಿದೆ. ಎರಡನೇ ಮತ್ತು ಅಂತಿಮ ಹಂತವು 2025ರ ಡಿಸೆಂಬರ್‌ ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಯೋಜನೆಗೆ 1,500 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read