ಡಿಜಿಟಲ್ ಪೇಮೆಂಟ್ ಪಾವತಿ ಒಟಿಪಿಗೆ ಜತೆ ಹೊಸ ಪರ್ಯಾಯ ನಿಯಮ ಜಾರಿಗೆ

ಮುಂಬೈ: ಡಿಜಿಟಲ್ ಪೇಮೆಂಟ್ ಪಾವತಿ ಒಟಿಪಿಗೆ ಎಸ್ಎಂಎಸ್ ಮಾತ್ರವಲ್ಲದೇ, ಹೊಸ ಮಾರ್ಗ ಬಳಕೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಮುಂದಾಗಿದ್ದು, ಮುಂದಿನ ಏಪ್ರಿಲ್ ನಿಂದ ನೂತನ ನಿಯಮ ಜಾರಿಗೆ ಬರಲಿದೆ.

ಡಿಜಿಟಲ್ ಪೇಮೆಂಟ್ ವೇಳೆ ಎಸ್ಎಂಎಸ್ ನಲ್ಲಿ ಒಟಿಪಿ ಬರುತ್ತದೆ. ಇದರೊಂದಿಗೆ ಹಲವು ಮಾರ್ಗಗಳಲ್ಲಿ ಒಟಿಪಿ ಬರುವಂತೆ ಹೊಸ ನಿಯಮಗಳನ್ನು ಮುಂದಿನ ಏಪ್ರಿಲ್ ನಿಂದ ಜಾರಿಗೆ ತರಲು ಆರ್‌ಬಿಐ ಮುಂದಾಗಿದೆ. ದ್ವಿಪಕ್ಷೀಯ ದೃಢೀಕರಣಕ್ಕೆ ಪಾಸ್ವರ್ಡ್, ಪಾಸ್ ಫ್ರೇಸ್, ಪಿನ್, ಕಾರ್ಡ್ ಹಾರ್ಡ್ವೇರ್, ಸಾಫ್ಟ್ವೇರ್ ಟೋಕನ್, ಫಿಂಗರ್ ಪ್ರಿಂಟ್ ಆಧಾರಿತ ಅಥವಾ ಆಧಾರ್ ಆಧಾರಿತ ಬಯೋಮೆಟ್ರಿಕ್ಸ್ ಮೊದಲಾದ ಪರ್ಯಾಯ ದೃಢೀಕರಣ ಮಾರ್ಗಗಳನ್ನು, ಜಾರಿಗೆ ತರಲಾಗುವುದು.

ಡಿಜಿಟಲ್ ಪಾವತಿ ಒಟಿಪಿಗೆ ಮುಂದುವರೆದ ತಂತ್ರಜ್ಞಾನ ಅಳವಡಿಸಿಕೊಳ್ಳುವ ಉದ್ದೇಶದಿಂದ ಹೊಸ ನಿಯಮ ಜಾರಿಗೆ ಆರ್‌ಬಿಐ ಕ್ರಮ ಕೈಗೊಂಡಿದೆ. 2020ರ ಏಪ್ರಿಲ್ 1ರಿಂದ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read