ಬೆಚ್ಚಿಬಿದ್ಲು ಬೆಡ್ ಶೀಟ್ ಬದಲಿಸಲು ಬಂದ ಮಹಿಳೆ; ಅದರ ಮೇಲಿತ್ತು ಹಾವು

ಮಲಗುವ ಬೆಡ್ ಮೇಲೆ ಹಾವು ಕಂಡ್ರೆ ಹೇಗಿರುತ್ತೆ ?  ಬೆಚ್ಚಿಬೀಳೋದಂತೂ ಗ್ಯಾರಂಟಿ. ಅದೇ ರೀತಿಯ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಬೆಡ್ ಶೀಟ್ ಬದಲಿಸಲು ಹೋದ ಮಹಿಳೆಗೆ ಬೆಡ್ ಮೇಲೆ ಹಾವು ಕಂಡಿದ್ದು ಆಕೆ ಬೆಚ್ಚಿಬಿದ್ದಿದ್ದಾರೆ.

ಸಿಬಿಎಸ್ ನ್ಯೂಸ್ ಪ್ರಕಾರ, ಕ್ವೀನ್ಸ್ ಲ್ಯಾಂಡ್‌ನಲ್ಲಿ ಮಹಿಳೆಯೊಬ್ಬರು ಈ ವಾರದ ಆರಂಭದಲ್ಲಿ ತನ್ನ ಹಾಸಿಗೆಯ ಮೇಲೆ ಆರು ಅಡಿ ಉದ್ದದ ಹಾವನ್ನು ಕಂಡಿದ್ದಾರೆ.

ನಂತರ ಅದನ್ನು ರಕ್ಷಿಸಿ ಮನೆಯಿಂದ ಹೊರಕ್ಕೆ ಸಾಗಿಸಲಾಯಿತು. ಮಹಿಳೆಯ ಹಾಸಿಗೆಯಲ್ಲಿ ಮಲಗಿರುವ ಹಾವಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟು ಉರಗತಜ್ಞರು ಫೋಟೋವನ್ನು ಹಂಚಿಕೊಂಡಿದ್ದು, “ಇಂದು ರಾತ್ರಿ ಹಾಸಿಗೆಯನ್ನು ಎಚ್ಚರಿಕೆಯಿಂದ ಪರಿಶೀಲಿಸಿ ! ಈ ಪೂರ್ವ ಕಂದು ಹಾವು ಸುರಕ್ಷಿತವಾಗಿ ಸ್ಥಳಾಂತರಗೊಂಡಿದೆ” ಎಂದು ಟ್ವೀಟ್ ಮಾಡಿದ್ದಾರೆ.

The snake is seen lying on the bed. (credit: Fb/zacheryssnakeandreptilerelocation )

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read