ರಾತ್ರಿ ಮಲಗುವ ಮುನ್ನ ತಲೆ ಬಳಿ ಈ ವಸ್ತು ಇದ್ರೆ ತಕ್ಷಣ ತೆಗೆದುಬಿಡಿ

ಮನೆಯ ವಸ್ತು ಮಾತ್ರವಲ್ಲ ಮನೆಯೊಳಗಿನ ವಾಸ್ತು ಕೂಡ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತವೆ. ವ್ಯಕ್ತಿಯ ಅಭ್ಯಾಸಗಳು, ಸುತ್ತ ಇಡುವ ವಸ್ತುಗಳು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಸಾಮಾನ್ಯವಾಗಿ ಮಲಗುವ ವೇಳೆ ತಲೆ ಬಳಿ ಕೆಲ ವಸ್ತುಗಳನ್ನು ಇಟ್ಟು ಮಲಗ್ತಾರೆ. ಇದು ನಕಾರಾತ್ಮಕ ಶಕ್ತಿ ಹೆಚ್ಚಿಸುತ್ತದೆ.

ಮಲಗುವ ಕೋಣೆಯಲ್ಲಿ ಕನ್ನಡಿ ಇಡಬಾರದು. ಒಂದು ವೇಳೆ ಇದ್ದಲ್ಲಿ ರಾತ್ರಿ ಅದನ್ನು ಮುಚ್ಚಿಡಬೇಕು.

ಜನರು ರಾತ್ರಿ ಪುಸ್ತಕವನ್ನು ಓದಿ ತಲೆ ಬಳಿ ಇಟ್ಟು ಮಲಗ್ತಾರೆ. ಇದು ತಪ್ಪು. ಪುಸ್ತಕಗಳನ್ನು ತಲೆ ಬಳಿ ಇಟ್ಟು ಮಲಗಿದ್ರೆ ನಿದ್ರಾಹೀನತೆ ಕಾಡುತ್ತದೆ. ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ.

ನಿದ್ದೆ ಮಾಡುವಾಗ ಅನೇಕರು ಚಪ್ಪಲಿಗಳನ್ನು ತಲೆಯ ಹತ್ತಿರ ಅಥವಾ ಹಾಸಿಗೆಯ ಬಳಿ ಇಡುತ್ತಾರೆ. ಇದು ಕೂಡ ವ್ಯಕ್ತಿಯ ಜೀವನದಲ್ಲಿ ನಕಾರಾತ್ಮಕತೆಯನ್ನು ತರುತ್ತದೆ.

ನಿದ್ದೆ ಮಾಡುವಾಗ ಪರ್ಸ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ತಲೆಯ ಬಳಿ ಇಡಬೇಡಿ. ಮೊಬೈಲ್, ಲ್ಯಾಪ್‌ಟಾಪ್, ವಾಚ್ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ತಲೆ ಬಳಿ ಪರ್ಸ್ ಇಟ್ಟು ಮಲಗಿದ್ರೆ ಹಣಕಾಸಿನ ಬಿಕ್ಕಟ್ಟು ಎದುರಾಗುತ್ತದೆ.

ತಲೆಯ ಬಳಿ ಎಣ್ಣೆಯಿಟ್ಟು ಮಲಗುವುದು ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು.

ನೀರಿನ ಬಾಟಲಿ ಅಥವಾ ಯಾವುದೇ ಪಾತ್ರೆಯಲ್ಲಿ ನೀರು ತುಂಬಿ ತಲೆ ಬಳಿ ಇಡುವುದು ಚಂದ್ರ ದೋಷಕ್ಕೆ ಕಾರಣವಾಗುತ್ತದೆ. ಮಾನಸಿಕ ಸಮಸ್ಯೆ ಎದುರಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read