ಮಲ ವಿಸರ್ಜನೆ ಅರ್ಜೆಂಟ್ ಆದಾಗ ಶೌಚಾಲಯಕ್ಕೆ ಓಡಿ….… ಇಲ್ಲ ಅಂದ್ರೆ ಅಪಾಯ ಗ್ಯಾರಂಟಿ….!

ಮಲ ವಿಸರ್ಜನೆ ಅರ್ಜೆಂಟ್‌ ಆದಾಗ ಅದನ್ನು ನಿಸರ್ಗ ಕರೆ ಅಂತಾ ಕೆಲವರು ಕರೆಯುತ್ತಾರೆ. ಪ್ರತಿಯೊಬ್ಬ ವ್ಯಕ್ತಿ ಮಲ – ಮೂತ್ರ ವಿಸರ್ಜನೆ ಮಾಡ್ಲೇಬೇಕು. ಮಲ ವಿಸರ್ಜನೆ ಸರಿಯಾಗಿ ಆಗ್ತಿಲ್ಲವೆಂದ್ರೆ ಸಮಸ್ಯೆ ಕಾಡುತ್ತದೆ. ನಮ್ಮ ದೇಹದ ಕೊಳಕು, ಮಲದ ಮೂಲಕ ಹೊರಗೆ ಹೋಗುತ್ತದೆ. ಕೆಲವರು ಮಲ ವಿಸರ್ಜನೆಯನ್ನು ಸರಿಯಾಗಿ ಮಾಡೋದಿಲ್ಲ. ಸೂಕ್ತ ಸಮಯದಲ್ಲಿ ಮಲ ವಿಸರ್ಜನೆ ಮಾಡದೆ ಅದನ್ನು ತಡೆಹಿಡಿಯುವ ಕೆಲಸ ಮಾಡ್ತಾರೆ. ತಜ್ಞರು ಇದು ಬಹಳ ಅಪಾಯಕಾರಿ ಎಂದಿದ್ದಾರೆ.

ನಮ್ಮ ಆರೋಗ್ಯ ನಮ್ಮ ಕೈನಲ್ಲೇ ಇದೆ. ಆಹಾರ, ನೀರು, ನಿದ್ರೆ,  ಮಲ ವಿಸರ್ಜನೆ ಇವೆಲ್ಲವನ್ನೂ ಸರಿಯಾದ ಸಮಯದಲ್ಲಿ ಮಾಡದೆ ಹೋದ್ರೆ ಆರೋಗ್ಯ ಹದಗೆಡುತ್ತದೆ. ಮಲ ವಿಸರ್ಜನೆ ಅರ್ಜೆಂಟ್‌ ಆದಾಗ ಶೌಚಾಲಯಕ್ಕೆ ಹೋಗದೆ ಅದನ್ನು ತಡೆ ಹಿಡಿಯುವುದರಿಂದ ಮಲಬದ್ಧತೆ ಕಾಡುತ್ತದೆ.

ಅದಲ್ಲದೆ ದೀರ್ಘಕಾಲೀನ ಪರಿಣಾಮವುಂಟಾಗುತ್ತದೆ. ಕರುಳಿನಲ್ಲಿ ಕಿರಿಕಿರಿಯುಂಟಾಗುತ್ತದೆ. ಕರುಳಿನ ಕ್ಯಾನ್ಸರ್‌ ಕಾಡುವ ಅಪಾಯವಿದೆ ಎಂದು ತಜ್ಞರು ಹೇಳುತ್ತಾರೆ. ದೀರ್ಘ ಸಮಯ ನೀವು ಮಲವನ್ನು ತಡೆ ಹಿಡಿದಾಗ ಅದು ಹೊರಬರಲು ಬೇರೆ ಮಾರ್ಗ ಕಂಡುಕೊಳ್ಳುತ್ತದೆ. ಅದನ್ನು ಫೀಕಲ್ ವಾಮಿಟಿಂಗ್‌ ಎಂದು ಕರೆಯುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read