NETFLIX ಬಳಕೆದಾರರಿಗೆ ಕಹಿ ಸುದ್ದಿ; ಪಾಸ್ ವರ್ಡ್ ಹಂಚಿಕೆಗೆ ಬೀಳಲಿದೆ ಬ್ರೇಕ್

ಇದುವರೆಗೆ ಓಟಿಟಿ ಪ್ಲಾಟ್​ಫಾರ್ಮ್​ಗಳಲ್ಲಿ ಒಬ್ಬರು ಚಂದಾದಾರಿಕೆ ಮಾಡಿದ್ರೆ ಸಾಕು. ಅವರ ಹೆಸರಲ್ಲಿ ಐದು ಜನ ಅಥವಾ ಹತ್ತು ಜನ ಕಂಟೆಂಟ್ ನೋಡಬಹುದಾಗಿತ್ತು. ಆದರೆ ಇನ್ಮುಂದೆ ಹಾಗಾಗಲ್ಲ. ನೆಟ್​ಫ್ಲಿಕ್ಸ್​ ತನ್ನ ಗ್ರಾಹಕರಿಗೆ ಕಹಿ ಸುದ್ದಿಯೊಂದನ್ನು ನೀಡುತ್ತಿದೆ. ನೀವು ಇನ್ಮುಂದೆ ಒಬ್ಬರು ರಿಚಾರ್ಜ್ ಮಾಡಿಸಿ ಅನೇಕರಿಗೆ ಪಾಸ್ ವರ್ಡ್ ಕೊಡೋದಿಕ್ಕೆ ಆಗೋದಿಲ್ಲ. ಕೊಟ್ಟರೂ ಕಂಟೆಂಟ್ ಸಿಗೋದಿಲ್ಲ.

ಹೌದು, ಒಬ್ಬ ಚಂದಾದಾರು ಇನ್ಮುಂದೆ ಹೆಚ್ಚುವರಿ ಗ್ರಾಹಕನಿಗೆ ಪಾಸ್ ವರ್ಡ್ ಕೊಟ್ಟರೆ ಹೆಚ್ಚುವರಿ ಹಣ ಪಾವತಿ ಮಾಡಬೇಕು. ಈ ಶುಲ್ಕವನ್ನು ಬಿಲ್ಲಿಂಗ್ ವಿವರಗಳಲ್ಲಿ ಹೆಚ್ಚುವರಿ ಸದಸ್ಯ ಎಂದು ಸೇರಿಸಲಾಗುತ್ತದೆಯಂತೆ.

ನೆಟ್‌ಫ್ಲಿಕ್ಸ್ ಚಂದಾದಾರಿಕೆಯ ಹಂಚಿಕೆಯ ಮೂಲಕ ಹಣ ಗಳಿಸುವ ವಿಧಾನಕ್ಕೆ ನೆಟ್ ಫ್ಲಿಕ್ಸ್ ಮುಂದಾಗಿದೆ. ಆದರೆ ಎಷ್ಟು ಹೆಚ್ಚುವರಿ ಹಣ ಎಂದು ಇನ್ನೂ ಬಹಿರಂಗ ಆಗಿಲ್ಲ.

ಒಂದು ನೆಟ್‌ಫ್ಲಿಕ್ಸ್ ಖಾತೆಯಿಂದ ಅನೇಕರು ಕಂಟೆಂಟ್ ವೀಕ್ಷಣೆ ಮಾಡುತ್ತಿರುವುದರಿಂದ ನಷ್ಟ ಉಂಟಾಗುತ್ತಿದೆಯಂತೆ. ನೆಟ್‌ಫ್ಲಿಕ್ಸ್ ಸಂಸ್ಥೆ ಕಳೆದ 10 ವರ್ಷಗಳಲ್ಲೇ ಮೊದಲ ಬಾರಿ ಚಂದಾದಾರರ ನಷ್ಟವನ್ನು ಸಹ ಎದುರಿಸಿತ್ತಂತೆ. ಹೀಗಾಗಿ ಇಂಥದೊಂದು ಯೋಚನೆಯನ್ನು ಈ ಒಟಿಟಿ ಕಂಪನಿ ಮಾಡಿದೆ. ಇನ್ಮುಂದೆ ಆಯಾಯ ಚಂದಾದಾರರು ಮಾತ್ರ ಕಂಟೆಂಟ್ ವೀಕ್ಷಣೆ ಮಾಡೋದಿಕ್ಕೆ ಸಾಧ್ಯ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read