ಕಠ್ಮಂಡು: ನೇಪಾಳದಲ್ಲಿ ಹಿಂಸಾತ್ಮಕ ಪ್ರತಿಭಟನೆ ಮುಂದುವರೆದಿದೆ. ಪ್ರತಿಭಟನೆ ತೀವ್ರ ಸ್ವರೂಪ ಪಡೆದ ಬೆನ್ನಲ್ಲೇ ಕಠ್ಮಂಡು ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸೇನೆ ವಶಕ್ಕೆ ಪಡೆದಿದೆ.
ನೇಪಾಳ ರಾಜಧಾನಿ ಕಠ್ಮಂಡು ಸೇರಿದಂತೆ ವಿವಿಧ ನಗರಗಳಲ್ಲಿ ಇಂದು ಕೂಡ ಪ್ರತಿಭಟನೆ ಮುಂದುವರೆದಿರುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ. ನವದೆಹಲಿ-ಕಠ್ಮಂಡು ನಡುವೆ ಪ್ರತಿ ದಿನ ಸಂಚರಿಸುವ ಏರ್ ಇಂಡಿಯಾ =ದ ೬ ವಿಮಾನಗಳು ರದ್ದಾಗಿವೆ, ಇಂಡಿಗೋ, ನೇಪಾಳ ಏರ್ ಲೈನ್ಸ್ ವಿಮಾನಗಳ ಹಾರಾಟವೂ ಸ್ಥಗಿತಗೊಳಿಸಲಾಗಿದೆ.
ಪ್ರತಿಭಟನಾಕಾರರು ಸರ್ಕಾರಿ ಕಟ್ಟಡ, ರಾಜಕೀಯ ನಾಯಕರ ನಿವಾಸಗಳನ್ನು ಬೆಂಕಿ ಹಚ್ಚಿರುವ ಹಿನ್ನೆಲೆಯಲ್ಲಿ ಸೇನೆ ಸರ್ಕಾರದ ಮುಖ್ಯ ಸಚಿವಾಲಯ ಕಟ್ಟಡವಾದ ಸಿಂಗ್ದರ್ಬಾರ್ ನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಮತ್ತೊಂದೆಡೆ ಪವಿತ್ರ ಪಶುಪತಿನಾಥ ದೇವಾಲಯದ ದ್ವಾರ ಧ್ವಂಸಕ್ಕೆ ಪ್ರತಿಭಟನಾಕಾರರು ಮುಂದಾಗುತ್ತಿದ್ದಂತೆ ಮಿಲಿಟರಿ ಪಡೆಗಳು ಮಧ್ಯಪ್ರವೇಶ ಮಾಅಡಿದ್ದು, ಪ್ರತಿಭಟನಾಕಾರರನ್ನು ತಡೆದಿದ್ದಾರೆ.