ನವದೆಹಲಿ: ನೇಪಾಳದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, 50 ಜನ ಸಾವನ್ನಪ್ಪಿದ್ದಾರೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 6.4 ರಷ್ಟು ದಾಖಲಾಗಿದೆ.
ಪ್ರಬಲ ಭೂಕಂಪದಲ್ಲಿ 50 ಜನ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಜಾಜರಕೋಟ್ ಜಿಲ್ಲೆ ಪೈಂಕ್ ನಲ್ಲಿ ಕೇಂದ್ರ ಬಿಂದು ಕಂಡುಬಂದಿದೆ.
ಉತ್ತರ ಭಾರತದ ಹಲವು ರಾಜ್ಯಗಳಲ್ಲಿಯೂ ಭೂಮಿ ಕಂಪಿಸಿದೆ. ದೆಹಲಿ, NCR, ಉತ್ತರ ಪ್ರದೇಶ, ಬಿಹಾರ, ಉತ್ತರಾಖಂಡ ಸೇರಿದಂತೆ ಹಲವೆಡೆ ಭೂಕಂಪ ಸಂಭವಿಸಿದೆ.
ನೇಪಾಳದ ರಾಷ್ಟ್ರೀಯ ಭೂಕಂಪನ ಕೇಂದ್ರವು ಭೂಕಂಪದ ತೀವ್ರತೆ 6.4 ಎಂದು ಹೇಳಿದೆ. ಆದರೆ ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ಸ್ (GFZ) ನಂತರದ ತೀವ್ರತೆಯನ್ನು 5.7 ಕ್ಕೆ ಇಳಿಸಿತು. U.S. ಭೂವೈಜ್ಞಾನಿಕ ಸಮೀಕ್ಷೆಯು 5.6 ಎಂದು ತಿಳಿಸಿದೆ.
1,90,000 ಜನಸಂಖ್ಯೆ, ದೂರದ ಬೆಟ್ಟಗಳಲ್ಲಿ ಹರಡಿರುವ ಹಳ್ಳಿಗಳನ್ನು ಹೊಂದಿರುವ ಗುಡ್ಡಗಾಡು ಜಿಲ್ಲೆ ಜಾಜರ್‌ಕೋಟ್‌ನ ಭೂಕಂಪನದ ಸಮೀಪವಿರುವ ಪ್ರದೇಶದಲ್ಲಿ ಸಂಪರ್ಕವನ್ನು ಸ್ಥಾಪಿಸಲು ಸಾಧ್ಯವಾಗಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಜಜರ್ಕೋಟ್ ಸ್ಥಳೀಯ ಅಧಿಕಾರಿ ಹರೀಶ್ ಚಂದ್ರ ಶರ್ಮಾ ಅವರು ತಮ್ಮ ಜಿಲ್ಲೆಯಲ್ಲಿ ಕನಿಷ್ಠ 34 ಜನರು ಸಾವನ್ನಪ್ಪಿದ್ದರೆ, ನೆರೆಯ ರುಕುಮ್ ಪಶ್ಚಿಮ ಜಿಲ್ಲೆಯಲ್ಲಿ ಕನಿಷ್ಠ 35 ಸಾವುಗಳು ವರದಿಯಾಗಿವೆ ಎಂದು ಪೊಲೀಸ್ ಅಧಿಕಾರಿ ನಮರಾಜ್ ಭಟ್ಟರಾಯ್ ಹೇಳಿದ್ದಾರೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.
Nepal Earthquake | 28 people dead in Rukum West and 20 dead in Jajarkot: DSP of Rukum West Namraj Bhattarai and DSP of Jajarkot Santosh Rokka to ANI
Total death toll stands at 48 pic.twitter.com/mcNwxaqolV
— ANI (@ANI) November 3, 2023