ಪ್ರಿಯತಮೆಗೆ ಅಂತ್ಯಕ್ರಿಯೆಗೆ ಆಹ್ವಾನಿಸಿ ಲೈವ್ ನಲ್ಲೇ ಪ್ರಾಣಬಿಟ್ಟ ಪ್ರಿಯತಮ…!

ಬೆಂಗಳೂರು: ರೇಬಿಸ್ ರೋಗ ಉಲ್ಬಣಗೊಂಡು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆ ದಾಖಲಾಗಿದ್ದ ಯುವಕನೊಬ್ಬ ತನ್ನ ಪ್ರಿಯತಮೆಗೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಲೇ ಪ್ರಾಣಬಿಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ 22 ವರ್ಷದ ಕಿರಣ್, ರೇಬಿಸ್ ಕಾಯಿಲೆಯಿಂದ ಬಳಲುತ್ತಿದ್ದ. ನಿಮಾನ್ಸ್ ಗೆ ದಾಖಲಾಗಿದ್ದ ಕಿರಣ್, ತನ್ನ ಪ್ರಿಯತಮೆಗೆ ವಿಡಿಯೋ ಕಾಲ್ ಮಾಡಿ ತಾನು ಸಾವನ್ನಪ್ಪುತ್ತಿರುವುದಾಗಿ , ತನ್ನ ಅಂತ್ಯಕ್ರಿಯೆಗೆ ಬರುವಂತೆ ಆಹ್ವಾನಿಸುತ್ತಲೇ ಉಸಿರು ಚೆಲ್ಲಿದ್ದಾನೆ.

ನಿಮಾನ್ಸ್ ಆಸ್ಪತ್ರೆಯಲ್ಲಿ ಬೆಡ್ ಮೇಲೆ ಮಲಗಿಯೇ ವಿಡಿಯೋ ಮಾಡಿರುವ ಕಿರಣ್, ಇದು ನನ್ನ ಆಕಸ್ಮಿಕ ಸಾವು. ನಿನ್ನ ಅಪ್ಪ ಹೇಳಿದಂತೆ ಒಳ್ಳೆ ಹುಡುಗನನ್ನು ಮದುವೆಯಾಗು. ನಿನಗೆ ಹುಟ್ಟಿದ ಮಗುವಿಗೆ ನನ್ನ ಹೆಸರಿಡು. ನನ್ನ ಅಂತ್ಯಕ್ರಿಯೆಗೆ ಬಂದು ಹೋಗು. ನಿನ್ನ ತಂಗಿಯನ್ನೂ ಕರೆದುಕೊಂಡು ಬಾ ಎಂದು ಹೇಳಿ ಕೈ ಮುಗಿಯುತ್ತಲೇ ಪ್ರಾಣ ಬಿಟ್ಟಿದ್ದಾನೆ.

ಕಿರಣ್ ತಾನು ಪ್ರೀತಿಸಿದ್ದ ಯುವತಿಗೆ ಆಗಸ್ಟ್ 3ರಂದು ರಿಂಗ್, ಕಾಲು ಚೈನು ಕೊಡಿಸಿದ್ದನಂತೆ. ಈ ವಿಷಯ ತಿಳಿದು ಯುವತಿಯ ತಂದೆ ಬೈದಿದ್ದರಂತೆ ಇಬ್ಬರ ಪ್ರೀತಿಯನ್ನು ನಿರಾಕರಿಸಿದ್ದರಂತೆ. ಯುವತಿಯ ಮನೆಯವರೇ ತನ್ನ ಮಗನಿಗೆ ಏನೋ ಮಾಡಿ ಸಾಯುವಂತೆ ಮಾಡಿದ್ದಾರೆ ಎಂದು ಯುವಕನ ಕುಟುಂಬ ಆರೋಪಿಸಿದೆ. ಆದರೆ ಯುವಕ ರೇಬಿಸ್ ಕಾಯಿಲೆ ಉಲ್ಬಣಗೊಂಡು ನಿಮಾನ್ಸ್ ಸೇರಿದ್ದ ಎಂದು ಹೇಳಲಾಗುತ್ತಿದೆ. ಆಸ್ಪತ್ರೆಯ ಬೆಡ್ ಮೇಲಿಂದಲೇ ವಿಡಿಯೋ ಮಾಡುತ್ತ ಯುವಕ ಉಸಿರು ಚೆಲ್ಲಿದ್ದಾನೆ. ಆಗಸ್ಟ್ 9ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read