ಒಂದೇ ಮನೆಯ ಮೂವರು NEET ಗೆದ್ದು ಡಾಕ್ಟರ್ಸ್‌ ; ಇಲ್ಲಿದೆ ಆಗ್ರಾ ಕುಟುಂಬದ ಯಶಸ್ಸಿನ ಸ್ಟೋರಿ !

ಉತ್ತರ ಪ್ರದೇಶದ ಆಗ್ರಾದ ಭೋಲಾರಾಮ್ ತ್ಯಾಗಿ ಅವರ ಕುಟುಂಬವು 2024 ರಲ್ಲಿ ಸಂಭ್ರಮದಲ್ಲಿತ್ತು. ಏಕೆಂದರೆ ಒಂದೇ ಕುಟುಂಬದ ಮೂವರು ಮಕ್ಕಳು NEET ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ದಯಾಳ್‌ಬಾಗ್ ನಿವಾಸಿಯಾದ ಭೋಲಾರಾಮ್ ತ್ಯಾಗಿ ಅವರ ಮೂವರು ಪುತ್ರರಲ್ಲಿ ಹಿರಿಯ ಮಗನ ಮಗ ಅಜಯ್ ತ್ಯಾಗಿ ಈಗಾಗಲೇ MBBS ಪೂರ್ಣಗೊಳಿಸಿದ್ದಾರೆ. ಎರಡನೇ ಮಗ ಹೇತ್ರಾಮ್ ಶಿಕ್ಷಕರಾಗಿದ್ದು, ಅವರ ಮಕ್ಕಳು ಪೂಜಾ ಮತ್ತು ಮನೋಜ್ ಕಳೆದ ವರ್ಷ NEET ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಮೂರನೇ ಮಗ ಶಿವ ತ್ಯಾಗಿ ಉದ್ಯಮಿಯಾಗಿದ್ದು, ಅವರ ಮಗಳು ಮಾನಸಿ ಕೂಡ NEET ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ.

ಪೂಜಾ 720 ಕ್ಕೆ 676 ಅಂಕಗಳನ್ನು ಗಳಿಸಿದರೆ, ಮನೋಜ್ 671 ಮತ್ತು ಮಾನಸಿ 640 ಅಂಕಗಳನ್ನು ಪಡೆದಿದ್ದಾರೆ. ಈ ಸಾಧನೆಯಿಂದ ಕುಟುಂಬವು “ವೈದ್ಯರ ಕುಟುಂಬ” ಎಂದು ಗುರುತಿಸಿಕೊಂಡಿದೆ. ಈ ಮೂವರು ಮಕ್ಕಳು NEET ಪರೀಕ್ಷೆಗೆ ತಯಾರಿ ನಡೆಸಲು ಟಿವಿ ಮತ್ತು ಮೊಬೈಲ್‌ನಿಂದ ದೂರವಿದ್ದರು. ಅವರು ಎಲ್ಲಿಯೂ ಹೊರಗೆ ಹೋಗದೆ ಮತ್ತು ಪಾರ್ಟಿಗಳಲ್ಲಿ ಭಾಗವಹಿಸದೆ ಪುಸ್ತಕಗಳನ್ನು ಓದುವುದರಲ್ಲಿಯೇ ತಮ್ಮನ್ನು ತೊಡಗಿಸಿಕೊಂಡರು. ಪ್ರತಿದಿನ ಗಂಟೆಗಟ್ಟಲೆ ಅಧ್ಯಯನ ಮಾಡಿ ಯಶಸ್ಸು ಸಾಧಿಸಿದ್ದಾರೆ. ಈ ಮೂವರು ಮಕ್ಕಳ ಕಥೆ NEET ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಎಲ್ಲರಿಗೂ ಪ್ರೇರಣೆಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read