ಬೆಂಗಳೂರು: ಯುಜಿ ನೀಟ್ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಪದವಿ ಕೋರ್ಸ್ ಗಳ ಮುಂದುವರಿದ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆರಂಭಿಸಿದ್ದು, ಅಭ್ಯರ್ಥಿಗಳು ತಮ್ಮ ಇಚ್ಛೆ/ಆಯ್ಕೆಗಳನ್ನು ಮರುಕ್ರಮಗೊಳಿಸಲು ಸೆ.17 ಮತ್ತು 18ರಂದು ಅವಕಾಶ ನೀಡಲಾಗಿದೆ.
400 ವೈದ್ಯಕೀಯ ಸೀಟು ಹೆಚ್ಚುವರಿಯಾಗಿ ಲಭ್ಯವಾಗಿರುವ ಹಾಗೂ ಮೈಸೂರಿನ ಫಾರೂಕ್ ವೈದ್ಯಕೀಯ ಕಾಲೇಜು ಹೊಸದಾಗಿ ಆರಂಭವಾಗುತ್ತಿರುವ ಕಾರಣ ಇಚ್ಛೆ/ಆಯ್ಕೆಗಳನ್ನು ಮರುಕ್ರಮಗೊಳಿಸಲು ಅವಕಾಶ ನೀಡಲಾಗಿದೆ.
ಅಭ್ಯರ್ಥಿಗಳು ತಮ್ಮ ಪೋಷಕರ ಜತೆ ಚರ್ಚೆ ನಡೆಸಿ, ತಮಗೆ ಸೂಕ್ತ ಅನ್ನಿಸುವ ಹಾಗೂ ಶುಲ್ಕ ಕಟ್ಟಲು ಸಾಧ್ಯವಾಗುವಂತಹ ಕಾಲೇಜುಗಳನ್ನೇ ಇಚ್ಛೆ/ಆಯ್ಕೆಗಳನ್ನು ದಾಖಲು ಮಾಡುವ ಸಂದರ್ಭದಲ್ಲಿ ಪರಿಗಣಿಸಬೇಕು. ಏಕೆಂದರೆ ಈ ಸುತ್ತಿನಲ್ಲಿ ಸೀಟು ಹಂಚಿಕೆ ನಂತರ ಪ್ರವೇಶ ಪಡೆಯುವುದು ಕಡ್ಡಾಯವಾಗಿರುತ್ತದೆ.
ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಆಸಕ್ತಿ ಇರುವ ಹಾಗೂ ಒಂದು ಲಕ್ಷ ರೂಪಾಯಿ ಕಾಷನ್ ಡೆಪಾಸಿಟ್ ಕಟ್ಟಿದ್ದರೂ ಈ ಹಿಂದಿನ ಸುತ್ತಿನಲ್ಲಿ ಎಂಜಿನಿಯರಿಂಗ್ ಇತ್ಯಾದಿ ಕೋರ್ಸ್ ಗಳಿಗೆ ಸೀಟು ಹಂಚಿಕೆಯಾಗಿ ಪ್ರವೇಶ ಪಡೆದವರಿಗೂ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಈ ಸುತ್ತಿನಲ್ಲಿ ಅವಕಾಶ ನೀಡಲಾಗುವುದು. ಅಂತಹವರು ಕಾಷನ್ ಡೆಪಾಸಿಟ್ ಕಟ್ಟಿ ಪುನಃ ಇಚ್ಛೆಗಳನ್ನು ಮರುವಿಂಗಡಣೆ ಮಾಡಿಕೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
#UGNEET-25: ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಪದವಿ ಕೋರ್ಸ್ಗಳ ಮುಂದುವರಿದ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆರಂಭಿಸಿದ್ದು, ಅಭ್ಯರ್ಥಿಗಳು ತಮ್ಮ ಇಚ್ಛೆ/ಆಯ್ಕೆಗಳನ್ನು ಮರುಕ್ರಮಗೊಳಿಸಲು ಸೆ.17 ಮತ್ತು 18ರಂದು ಅವಕಾಶ ನೀಡಲಾಗಿದೆ.
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) September 16, 2025
400 ವೈದ್ಯಕೀಯ ಸೀಟು ಹೆಚ್ಚುವರಿಯಾಗಿ ಲಭ್ಯವಾಗಿರುವ ಹಾಗೂ ಮೈಸೂರಿನ ಫಾರೂಕ್ ವೈದ್ಯಕೀಯ… pic.twitter.com/8r6WXDvDs0