ರಜೆಯ ಮಜಾ ಸಿಗಬೇಕೇ…? ಹಾಗಾದ್ರೆ ಅಂಡಮಾನ್ – ನಿಕೋಬಾರ್ ಪ್ರವಾಸಕ್ಕೆ ಈಗಲೇ ಮಾಡಿ ಪ್ಲಾನ್

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಭಾರತದ ಕೇಂದ್ರಾಡಳಿತ ಪ್ರದೇಶಗಳು. ಇವು ಬಂಗಾಳ ಕೊಲ್ಲಿಯಲ್ಲಿವೆ. ಪೋರ್ಟ್ ಬ್ಲೇರ್ ಇದರ ರಾಜಧಾನಿ.

ಇತಿಹಾಸದ ಪ್ರಕಾರ ಇದು ಬಹುಕಾಲ ದುಷ್ಕರ್ಮಿಗಳ, ಕೊಲೆಪಾತಕಿಗಳ ಮತ್ತು ರಾಜಕೀಯ ಬಂಧಿಗಳ ನಿವಾಸವಾಗಿತ್ತು. ಬಂಧಿಗಳನ್ನು ಇಲ್ಲಿಗೆ ರವಾನಿಸಲಾಗುತ್ತಿತ್ತು. ಬಳಿಕ ಅಲ್ಲಿಂದ ಅವರು ಹಿಂದಿರುಗುವ ಅವಕಾಶವೇ ಇರುತ್ತಿರಲಿಲ್ಲ. 1945ರಲ್ಲಿ ಈ ಕಾನೂನು ರದ್ದಾಯಿತು. 1942ರಲ್ಲಿ ಜಪಾನೀಯರು ಈ ದ್ವೀಪವನ್ನು ಅಕ್ರಮಿಸಿಕೊಂಡರು. 1956ರ ಬಳಿಕ ಇದು ಭಾರತಕ್ಕೆ ಸೇರಲ್ಪಟ್ಟಿತು.

ಇಲ್ಲಿ ಸಾಕಷ್ಟು ಹವಳದ ದ್ವೀಪಗಳಿವೆ. ಉಳಿದ ಭಾಗದಲ್ಲಿ ಉಷ್ಣ ವಲಯದ ಕಾಡುಗಳಿವೆ. ನಿತ್ಯ ಹರಿದ್ವರ್ಣದ, ಚಳಿಗಾಲದಲ್ಲಿ ಎಲೆ ಉದುರಿಸುವ ಮತ್ತು ಮ್ಯಾನ್ ಗ್ರೋವ್ ಜಾತಿಯ ಮರಗಳಿಂದ ಈ ಕಾಡು ತುಂಬಿದೆ. ಅಗಲವಾದ ಎಲೆಗಳುಳ್ಳ ಮರಗಳು ಇಲ್ಲಿ ಹೆಚ್ಚಿವೆ. ಈ ದ್ವೀಪದ ಆರ್ಥಿಕ ಸಂಪತ್ತು ಕೇವಲ ಅರಣ್ಯ. ಮೀನುಗಾರಿಕೆ ಮತ್ತು ವ್ಯವಸಾಯ ಅಲ್ಲಿನ ಜನರ ಜೀವಾನೋಪಾಯವಾಗಿದೆ.

ಹಡಗು ಮತ್ತು ವಿಮಾನದ ಮೂಲಕ ನೀವಿಲ್ಲಿಗೆ ತಲುಪಬಹುದು. ಸುತ್ತಲೂ ಅಗರ್ಭ ಜಲಜೀವರಾಶಿಯಿಂದ ತುಂಬಿರುವ ಈ ಪ್ರದೇಶ ಪ್ರವಾಸಿಗರಿಗೆ ರೋಮಾಂಚನವನ್ನುಂಟು ಮಾಡುತ್ತದೆ. ಇಲ್ಲಿನ ಪ್ರಶಾಂತವಾದ ಸಮುದ್ರ ದಂಡೆಗಳು ರೋಚಕ ರಜೆಯ ಅನುಭವವನ್ನು ಕಟ್ಟಿಕೊಡುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read