BIG NEWS: ಪರಮಾಣು ಒಪ್ಪಂದದಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲು: ಭಾರತದಲ್ಲೇ ಅಣು ರಿಯಾಕ್ಟರ್ ವಿನ್ಯಾಸ, ನಿರ್ಮಾಣಕ್ಕೆ ಅಮೆರಿಕ ಸಮ್ಮತಿ

ನವದೆಹಲಿ: ಭಾರತದಲ್ಲಿಯೇ ಅಣು ರಿಯಾಕ್ಟರ್ ಮತ್ತು ನಿರ್ಮಾಣಕ್ಕೆ ಅಮೆರಿಕ ಸಮ್ಮತಿಸಿದ್ದು, 20 ವರ್ಷ ಹಿಂದಿನ ಅಣು ಒಪ್ಪಂದ ಜಾರಿಯಲ್ಲಿ ಮಹತ್ವದ ಮೈಲುಗಲ್ಲು ಸ್ಥಾಪಿಸಿದಂತಾಗಿದೆ. ಈ ಮೂಲಕ ಉಭಯ ದೇಶಗಳ ಸಂಬಂಧ ವೃದ್ಧಿಯಾಗಿದೆ.

ಅಮೆರಿಕದ ಕಂಪನಿಗಳು ಭಾರತದಲ್ಲಿಯೇ ಪರಮಾಣು ಘಟಕಗಳ ವಿನ್ಯಾಸ ಮಾಡಿ ಭಾರತದಲ್ಲಿಯೇ ಅದನ್ನು ನಿರ್ಮಿಸಲು ಅಮೆರಿಕ ಸರ್ಕಾರ ಅನುಮತಿ ನೀಡಿದೆ. ಇದರೊಂದಿಗೆ 20 ವರ್ಷಗಳ ಹಿಂದೆ ಉಭಯ ದೇಶಗಳ ನಡುವೆ ಮಾಡಿಕೊಂಡಿದ್ದ ಪರಮಾಣು ಒಪ್ಪಂದದಲ್ಲಿ ಮಹತ್ವದ ಮೈಲುಗಲ್ಲು ಸ್ಥಾಪಿಸಿದಂತಾಗಿದೆ.

ಅಮೆರಿಕದ ಹೊಲ್ಟೆಕ್ ಇಂಟರ್ನ್ಯಾಷನಲ್ಸ್ ಕಂಪನಿಗೆ ಭಾರತದಲ್ಲಿ ಅಣು ರಿಯಾಕ್ಟರ್ ವಿನ್ಯಾಸ ಮತ್ತು ನಿರ್ಮಾಣಕ್ಕೆ ಅಮೆರಿಕದ ಇಂಧನ ಇಲಾಖೆ ಅನುಮೋದನೆ ನೀಡಿದೆ. ಈಗಾಗಲೇ ಗುಜರಾತ್ ನಲ್ಲಿ ಉತ್ಪಾದನಾ ಘಟಕ ಹೊಂದಿರುವ ಹೊಲ್ಟೆಕ್ ಇನ್ನು ಮುಂದೆ ಹೊಲ್ಟೇಕ್ ಏಷ್ಯಾ, ಕನ್ಸಲ್ಟಿಂಗ್ ಇಂಜಿನಿಯರ್ಸ್, ಎಲ್ ಅಂಡ್ ಟಿ ಕಂಪನಿಗಳಿಗೆ ಸಣ್ಣ ಮಾಡ್ಯುಲರ್ ರಿಯಾಕ್ಟರ್ ತಂತ್ರಜ್ಞಾನವನ್ನು ಕೊಡಬಹುದಾಗಿದೆ. ಆದರೆ, ಇದನ್ನು ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಸಂರಕ್ಷತಾ ನಿಯಮಗಳ ಅಡಿಯಲ್ಲಿ ಶಾಂತಿಯುತ ಪರಮಾಣು ಚಟುವಟಿಕೆಗಳಿಗೆ ಮಾತ್ರ ಬಳಸಲು ಅನುಮತಿ ನೀಡಲಾಗಿದೆ. ಪರಮಾಣು ಶಸ್ತ್ರಾಸ್ತ್ರ ಸ್ಪೋಟಕ ಅಥವಾ ಮಿಲಿಟರಿ ಉದ್ದೇಶದ ಬಳಕೆ ನಿರ್ಬಂಧಿಸಲಾಗಿದೆ. ಇದರಿಂದ ಭಾರತದ ಪರಮಾಣು ವಲಯ ತನ್ನ ರಿಯಾಕ್ಟರ್ ಅನ್ನು ವಿಶ್ವದಾದ್ಯಂತ ಬಳಕೆಯಲ್ಲಿರುವ ರಿಯಾಕ್ಟರ್ ಗಳ ರೀತಿ ಮೇಲ್ದರ್ಜೆಗೇರಿಸಲು ಸಹಾಯಕವಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read