29ನೇ ಮಹಡಿಯಿಂದ ಮಗಳನ್ನು ತಳ್ಳಿ ತಾನೂ ಜಿಗಿದ ತಾಯಿ ; ಮುಂಬೈನಲ್ಲೊಂದು ಮನ ಕಲಕುವ ಘಟನೆ !

ನವಿ ಮುಂಬೈನಲ್ಲಿ ಒಂದು ದುರದೃಷ್ಟಕರ ಘಟನೆ ನಡೆದಿದೆ. 35 ವರ್ಷದ ತಾಯಿಯೊಬ್ಬರು ತನ್ನ 8 ವರ್ಷದ ಮಗಳನ್ನು 29ನೇ ಮಹಡಿಯಿಂದ ತಳ್ಳಿ, ನಂತರ ತಾನೂ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಬುಧವಾರ ಬೆಳಿಗ್ಗೆ 8.15ಕ್ಕೆ ಪನ್ವೇಲ್‌ನ ಪಲಾಸ್ಪೆ ಫಾಟಾದ ಮ್ಯಾರಥಾನ್ ನೆಕ್ಸಾನ್‌ನ ಔರಾ ಕಟ್ಟಡದಲ್ಲಿ ನಡೆದಿದೆ.

ಮೃತ ತಾಯಿಯ ಹೆಸರು ಮೈಥಿಲಿ ಆಶಿಶ್ ದುವಾ. ಅವರು ಗೃಹಿಣಿಯಾಗಿದ್ದರು. ಅವರ ಪತಿ ಆಶಿಶ್ ದುವಾ (41) ಸಿವಿಲ್ ಕಾಂಟ್ರಾಕ್ಟರ್ ಆಗಿದ್ದಾರೆ. ಅವರ ಮಗಳ ಹೆಸರು ಮೈರಾ (8). ಕುಟುಂಬ 29ನೇ ಮಹಡಿಯಲ್ಲಿ ವಾಸವಾಗಿತ್ತು.

ಪತಿ ನೀಡಿದ ದೂರಿನ ಪ್ರಕಾರ, ಪತ್ನಿಗೆ ಮಾನಸಿಕ ಸಮಸ್ಯೆ ಇತ್ತು. ಆಕೆ ಮಗಳನ್ನು 29ನೇ ಮಹಡಿಯಿಂದ ತಳ್ಳಿ, ನಂತರ ತಾನೂ ಜಿಗಿದಿದ್ದಾಳೆ.

“ಪತಿ ಹೇಳುವ ಪ್ರಕಾರ ಪತ್ನಿ ಮಾನಸಿಕ ಚಿಕಿತ್ಸೆ ಪಡೆಯುತ್ತಿದ್ದರು, ಅವರ ಔಷಧಿ ಮುಗಿದಿತ್ತು. ಹಾಗಾಗಿ ಅವರು ಇತ್ತೀಚೆಗೆ ನಿಯಮಿತವಾಗಿ ಔಷಧಿ ತೆಗೆದುಕೊಳ್ಳುತ್ತಿರಲಿಲ್ಲ. ಘಟನೆ ನಡೆಯುವ ಮೊದಲು ಯಾವುದೇ ಜಗಳ ನಡೆದಿತ್ತೇ ಎಂದು ಹೇಳುವ ಸ್ಥಿತಿಯಲ್ಲಿ ಪತಿ ಇಲ್ಲ. ಅವರು ಮಲಗುವ ಕೋಣೆಯ ಸ್ನಾನಗೃಹಕ್ಕೆ ಹೋಗುತ್ತಿದ್ದಾಗ ಪತ್ನಿ ಅವರನ್ನು ಹೊರಗೆ ತಳ್ಳಿ ಬಾಗಿಲು ಹಾಕಿಕೊಂಡಿದ್ದರು. ಪತಿ ಹೊರಗಿನಿಂದ ಬಾಗಿಲು ಬಡಿಯುತ್ತಿದ್ದರೆ, ಮಗಳು ಒಳಗಿನಿಂದ ಸಹಾಯಕ್ಕಾಗಿ ಕೂಗುತ್ತಿದ್ದಳು,” ಎಂದು ಹಿರಿಯ ಪೊಲೀಸ್ ನಿರೀಕ್ಷಕ ನಿತಿನ್ ಠಾಕ್ರೆ ಹೇಳಿದ್ದಾರೆ.

ನಂತರ, ಪತಿಗೆ ಬಾಲ್ಕನಿ ಕಿಟಕಿ ತೆರೆಯುವ ಶಬ್ದ ಕೇಳಿಸಿತು, ಮಗಳ ಕಿರುಚಾಟ ನಿಂತು ಹೋಯಿತು. ಅವರಿಗೆ ಅನುಮಾನ ಬಂದು ಇನ್ನೊಂದು ಕಿಟಕಿಯಿಂದ ನೋಡಿದಾಗ ಕೆಳಗೆ ಜನರು ಸೇರಿದ್ದರು ಎಂದು ಪೊಲೀಸರು ಹೇಳಿದ್ದಾರೆ.

“ಈವರೆಗೂ ಮೃತ ಮಹಿಳೆಯ ಸಂಬಂಧಿಕರು ಯಾವುದೇ ಆರೋಪ ಮಾಡಿಲ್ಲ,” ಎಂದು ಠಾಕ್ರೆ ಹೇಳಿದ್ದಾರೆ.

ಪತಿ ಮೂಲತಃ ಆಗ್ರಾದ ಪಂಜಾಬಿ, ಪತ್ನಿ ಮಹಾರಾಷ್ಟ್ರದವರು. 2012ರಲ್ಲಿ ಪ್ರೇಮ ವಿವಾಹವಾಗಿದ್ದರು. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಮೃತ ತಾಯಿ ಮೇಲೆ ಕೊಲೆ ಪ್ರಕರಣ ದಾಖಲಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read