ಕ್ಷುಲ್ಲಕ ಕಾರಣಕ್ಕೆ ಘೋರ ಕೃತ್ಯ; ಐಟಿ ಉದ್ಯೋಗಿಯ ಬರ್ಬರ ಹತ್ಯೆ | Shocking Video

ನವಿ ಮುಂಬೈನ ಖಾರ್ಘರ್‌ನಲ್ಲಿ ಭಾನುವಾರ ರಾತ್ರಿ ನಡೆದ ಭೀಕರ ಘಟನೆಯಲ್ಲಿ 45 ವರ್ಷದ ಐಟಿ ಉದ್ಯೋಗಿಯೊಬ್ಬರು ದಾರುಣವಾಗಿ ಕೊಲ್ಲಲ್ಪಟ್ಟಿದ್ದಾರೆ. ಓವರ್‌ಟೇಕ್ ಮಾಡುವ ವಿಚಾರದಲ್ಲಿ ನಡೆದ ಸಣ್ಣ ಜಗಳವು ಕೊಲೆಯಲ್ಲಿ ಅಂತ್ಯಗೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹಲ್ಲೆಗೊಳಗಾದ ಶರ್ಮಾ ಪೊಲೀಸ್ ಠಾಣೆ ತಲುಪುವ ಪ್ರಯತ್ನ ಮಾಡುವ ಮುನ್ನವೇ ಕುಸಿದು ಬಿದ್ದಿದ್ದಾರೆ.

ಪೊಲೀಸರ ಪ್ರಕಾರ, ಇಪ್ಪತ್ತರ ಹರೆಯದ ಇಬ್ಬರು ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಬಂದು, ಮೋಟಾರ್‌ಸೈಕಲ್ ಓವರ್‌ಟೇಕ್ ಮಾಡುವ ವಿಚಾರಕ್ಕೆ ಶಿವಕುಮಾರ್ ರೋಷನ್‌ಲಾಲ್ ಶರ್ಮಾ (45) ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ. ವಾಗ್ವಾದ ತಾರಕಕ್ಕೇರಿ, ಆರೋಪಿಗಳು ಶರ್ಮಾ ಅವರ ಮೇಲೆ ಹೆಲ್ಮೆಟ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ನಂತರ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಖಾರ್ಘರ್ ನಿವಾಸಿಯಾಗಿದ್ದ ಶರ್ಮಾ ವಾಶಿಯ ನ್ಯೂಸಮ್ಮಿಟ್ ಟೆಕ್ನಾಲಜಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಭಾನುವಾರ ರಾತ್ರಿ ಸುಮಾರು 8.30 ರ ಸುಮಾರಿಗೆ ಅವರು ವಾಶಿಯಿಂದ ಮನೆಗೆ ಮೋಟಾರ್‌ಸೈಕಲ್‌ನಲ್ಲಿ ಹಿಂತಿರುಗುತ್ತಿದ್ದಾಗ ಬೆಲ್ಪಾಡ ಮತ್ತು ಉತ್ಸವ ಚೌಕ್ ನಡುವಿನ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. “ಜಗಳ ಹೇಗೆ ಪ್ರಾರಂಭವಾಯಿತು ಎಂಬುದು ನಮಗೆ ಇನ್ನೂ ಸ್ಪಷ್ಟವಾಗಿಲ್ಲ. ಓವರ್‌ಟೇಕ್ ಮಾಡುವ ವಿಚಾರಕ್ಕೆ ಜಗಳವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ” ಎಂದು ಖಾರ್ಘರ್ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಪರಾಗ್ ಲೊಂಡೆ ಹೇಳಿದ್ದಾರೆ.

ಜಗಳದ ಸಂದರ್ಭದಲ್ಲಿ, ಆರೋಪಿಗಳಲ್ಲಿ ಒಬ್ಬ ಶರ್ಮಾ ಅವರ ತಲೆಗೆ ಹೆಲ್ಮೆಟ್‌ನಿಂದ ಹಲವು ಬಾರಿ ಹೊಡೆದಿದ್ದಾನೆ. “ಬಾಹ್ಯ ಗಾಯಗಳಿರಲಿಲ್ಲ. ಹಲ್ಲೆಯ ನಂತರ, ಶರ್ಮಾ ಸುಮಾರು ಒಂದು ಕಿಲೋಮೀಟರ್ ಮೋಟಾರ್‌ಸೈಕಲ್ ಚಲಾಯಿಸಿ ಖಾರ್ಘರ್ ಪೊಲೀಸ್ ಠಾಣೆಯನ್ನು ತಲುಪಲು ಪ್ರಯತ್ನಿಸಿದ್ದರು ಎನ್ನಲಾಗಿದೆ.

ಘಟನೆಯನ್ನು ದಾರಿಹೋಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು ಮತ್ತು ಆ ವೀಡಿಯೊವನ್ನು ಖಾರ್ಘರ್ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ವೀಡಿಯೊ ಸಾಕ್ಷ್ಯದ ಆಧಾರದ ಮೇಲೆ, ಪೊಲೀಸರು ಇಬ್ಬರು ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಲು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

ಶರ್ಮಾ ಖಾರ್ಘರ್‌ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಅವರ ವಿವಾಹ ವಿವಾದದಲ್ಲಿದ್ದ ಕಾರಣ ಪತ್ನಿಯಿಂದ ದೂರವಾಗಿದ್ದರು. “ಅವರಿಗೆ ನಾಲ್ವರು ಸಹೋದರಿಯರಿದ್ದು, ಅವರೆಲ್ಲರೂ ಮದುವೆಯಾಗಿ ಪನ್ವೇಲ್ ಮತ್ತು ವಾಶಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅವರ ಹೆತ್ತವರು ಜೀವಂತವಾಗಿಲ್ಲ. ಶರ್ಮಾ ಸೆಕ್ಟರ್ 36 ರ ಸ್ವಪ್ನಪೂರ್ತಿ ಕಟ್ಟಡದಲ್ಲಿ ವಾಸಿಸುತ್ತಿದ್ದರು” ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ದೀಪಕ್ ಸರ್ವೆ ತಿಳಿಸಿದ್ದಾರೆ.

The IT Professional

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read