HomeInternationalಅಮೆರಿಕ & ಇಸ್ರೇಲ್ ಸಂಬಂಧದಲ್ಲಿ ಇರಾನ್ ಯುದ್ಧದ ನಂತರ ದಿಢೀರ್ ಬಿರುಕು? NATO Countries

ಅಮೆರಿಕ & ಇಸ್ರೇಲ್ ಸಂಬಂಧದಲ್ಲಿ ಇರಾನ್ ಯುದ್ಧದ ನಂತರ ದಿಢೀರ್ ಬಿರುಕು? NATO Countries

ಇರಾನ್ ಯುದ್ಧದ ನಂತರ ಜಾಗತಿಕ ಲೆಕ್ಕಾಚಾರಗಳು ತಲೆಕೆಳಗಾಗಿ ಹೋಗಿದ್ದು, ಒಂದು ಕಡೆ ಅಮೆರಿಕ ತನ್ನ ಮಾನ ತಾನೇ ಹರಾಜು ಹಾಕಿಕೊಂಡಿದೆ ಎಂದು ವಿರೋಧಿ ರಾಷ್ಟ್ರಗಳು ಹೇಳುತ್ತಿವೆ. ಹಾಗೇ ಇನ್ನೊಂದು ಕಡೆ ನೂರಾರು ವರ್ಷಗಳಿಂದ ಅಮೆರಿಕ ಜೊತೆಗೆ ನಿಂತಿದ್ದ ದೇಶಗಳು ಕೂಡ ಇದೀಗ ಅಮೆರಿಕ ವಿರುದ್ಧ ನಿಲ್ಲುವ & ಆ ಮೂಲಕ ನಿಮ್ಮ ಸಹವಾಸ ಸಾಕು ಎನ್ನುವ ಪರಿಸ್ಥಿತಿಗೆ ಬಂದಿವೆ. ಸುಮಾರು 3,000ಕ್ಕೂ ಹೆಚ್ಚು ಜನರನ್ನ ಬಲಿ ಪಡೆದ ಇರಾನ್ ಹಾಗೂ ಅಮೆರಿಕ ಯುದ್ಧ ಹೊಸ ತಲ್ಲಣವನ್ನೇ ಸೃಷ್ಟಿಸಿದೆ. ಇಂತಹ ಪರಿಸ್ಥಿತಿಯಲ್ಲೇ, ಅಮೆರಿಕ & ಇಸ್ರೇಲ್ ಸಂಬಂಧದಲ್ಲಿ ಇರಾನ್ ಯುದ್ಧದ ನಂತರ ದಿಢೀರ್ ಬಿರುಕು?

ಇಸ್ರೇಲ್ ಬಿಟ್ಟು ಅಮೆರಿಕ ಬದುಕಲಾರದು, ಅಮೆರಿಕ ಬಿಟ್ಟರೆ ಇಸ್ರೇಲ್ ಬೆನ್ನಿಗೆ ಗಟ್ಟಿಯಾಗಿ ನಿಲ್ಲುವ ಗೆಳೆಯ ಮತ್ತೊಬ್ಬ ಇಡೀ ಜಗತ್ತಿನಲ್ಲಿ ಇಲ್ಲ ಎಂಬ ಮಾತು ಇದೆ. ಇದಕ್ಕೆ ತಕ್ಕಂತೆ ಎರಡೂ ದೇಶಗಳು ಒಬ್ಬರ ಬೆನ್ನಿಗೆ ಮತ್ತೊಬ್ಬರು ನಿಂತು ಹೋರಾಡುತ್ತಾ ಬಂದಿದ್ದಾರೆ. ಅದರಲ್ಲೂ ಪ್ರಮುಖವಾಗಿ ಗಮನಿಸಬೇಕಾದ ಅಂಶ ಅದು ಮಧ್ಯಪ್ರಾಚ್ಯದ ಯುದ್ಧಗಳು, 2023 ಅಕ್ಟೋಬರ್ ತಿಂಗಳಲ್ಲಿ ಗಾಜಾ ವಿರುದ್ಧ ಇಸ್ರೇಲ್ ಯುದ್ಧ ಸಾರಿದ್ದಾಗ ಇದೇ ಅಮೆರಿಕ ಬೆನ್ನಿಗೆ ನಿಂತಿತ್ತು. ಆ ನಂತರ ಸಿರಿಯಾ & ಲೆಬನಾನ್ ಮೇಲೆ ದಾಳಿಗೆ ಕೂಡ ಇಸ್ರೇಲ್ ಸೇನೆ ಬೆನ್ನಿಗೆ ಅಮೆರಿಕ ನಿಂತಿತ್ತು. ಕೊನೆಗೆ ಕೆಲವು ತಿಂಗಳ ಹಿಂದಷ್ಟೇ ಇರಾನ್ ವಿರುದ್ಧ ಯುದ್ಧ ಸಾರಿದ್ದಾಗಲೇ ಈ ಅಮೆರಿಕ ಎಂಬ ಜಗತ್ತಿನ ದೊಡ್ಡಣ್ಣ ಮುಂದೆ ನುಗ್ಗಿ ಬಂದಿತ್ತು. ಆದರೆ ಎಲ್ಲಾ ಲೆಕ್ಕಾಚಾರವು ಈಗ ಇರಾನ್‌ನ ಮೇಲೆ ಯುದ್ಧ ಮುಗಿದ ನಂತರ ಬದಲಾಗಿ ಹೋಗುತ್ತಿದೆ.

NATO Countries Decisions May Affect US And Israel Relations
ಅಮೆರಿಕ & ಇಸ್ರೇಲ್ ಸಂಬಂಧದಲ್ಲಿ ಇರಾನ್ ಯುದ್ಧದ ನಂತರ ದಿಢೀರ್ ಬಿರುಕು?

ಅಮೆರಿಕ & ಇಸ್ರೇಲ್ ದೂರ ದೂರ?
ಹೌದು, ತಮ್ಮ ವೆರೈಟಿ ವೆರೈಟಿ ನಿರ್ಧಾರಗಳ ಮೂಲಕವೇ ಹೆಸರು ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈಗ ಇಸ್ರೇಲ್ ವಿರುದ್ಧ ರೊಚ್ಚಿಗೆದ್ದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಂದಹಾಗೆ ಅತ್ತ ಇರಾನ್ ವಿರುದ್ಧ ಯುದ್ಧ ಮಾಡಲು ನೇರವಾಗಿ ಇಸ್ರೇಲ್‌ಗೆ ಬೆಂಬಲ ನೀಡಿದ್ದ ಇದೇ ಟ್ರಂಪ್ ಅವರು ಕೋಪ, ಆಕ್ರೋಶ ಹೊರ ಹಾಕಲು ಕಾರಣವೂ ಇದೆಯಂತೆ. ಇದೀಗ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿಯನ್ನು ಮಾಡಿರುವ ಪ್ರಕಾರ, ಟ್ರಂಪ್ ಅವರು ದೂರವಾಣಿ ಮೂಲಕ ಇಸ್ರೇಲ್ ಪ್ರಧಾನಿ ಜೊತೆ ಮಾತುಕತೆ ನಡೆಸುವ ಸಮಯದಲ್ಲಿ ಬೇಸರ ಹೊರ ಹಾಕಿದ್ದಾರೆ ಎನ್ನಲಾಗಿದೆ. ಅದರಲ್ಲೂ ಇರಾನ್ ಯುದ್ಧ ವಿಚಾರದಲ್ಲಿ ಇಸ್ರೇಲ್ ಸರ್ಕಾರ ಅಮೆರಿಕದ ಮಾತು ಕೇಳುತ್ತಿಲ್ಲ ಎಂಬುದು ಕೂಡ ಇಲ್ಲಿ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಮೆರಿಕದ ಮಿತ್ರರು ಈಗ ಶತ್ರುಗಳು!
ಅಂದಹಾಗೆ ಅಮೆರಿಕದ ಪರಿಸ್ಥಿತಿ ಹೇಗೆ ಆಗಿದೆ ಎಂದರೆ, ಗುಲಾಬಿ ಗಿಡದ ಮೇಲೆ ಬಿದ್ದ ಸೀರೆಯಂತೆ ಆಗಿದೆ. ಅತ್ತ ಜೋರಾಗಿ ಎಳೆಯುವಂತೆಯೂ ಇಲ್ಲ, ಇತ್ತ ಸೀರೆ ಬಿಟ್ಟು ಹೋಗುವಂತೆಯೂ ಇಲ್ಲ. ಇರಾನ್ ವಿರುದ್ಧ ಯುದ್ಧ ನಡೆಸಿದ ಅಮೆರಿಕದ ನಡೆಗೆ ಸ್ವತಃ ನ್ಯಾಟೋ ಪಡೆಯ ದೇಶಗಳು ಬೇಸರ ಹೊರ ಹಾಕಿದ್ದವು, ಅಲ್ಲದೆ ನಾವು ಯುದ್ಧದಲ್ಲಿ ನೆರವು ನೀಡುವುದಿಲ್ಲ, ಎಂದು ನ್ಯಾಟೋ ಮಿಲಿಟರಿ ಒಕ್ಕೂಟದ ಅನೇಕ ದೇಶಗಳು ನೇರ ಸಂದೇಶ ನೀಡಿದ್ದವು.

ಇಷ್ಟೆಲ್ಲದರ ನಡುವೆ ಇರಾನ್ ಯುದ್ಧ ವಿಚಾರದಲ್ಲಿ ಶಾಂತಿ ಮಾತುಕತೆ ನಡೆಯುವಾಗ ಕೂಡ ಇಸ್ರೇಲ್ ತಮ್ಮ ಮಾತು ಕೇಳುತ್ತಿಲ್ಲ ಎಂಬ ಕಾರಣಕ್ಕೆ ಅಮೆರಿಕ ರೊಚ್ಚಿಗೆದ್ದಿದೆ. ಅದರಲ್ಲೂ ಜಾಗತಿಕ ಮಟ್ಟದಲ್ಲಿ ಅಮೆರಿಕಗೆ ಅವಮಾನ ಆಗಲು ಇಸ್ರೇಲ್ ಕಾರಣವಾಗಿದೆ, ಎಂಬುದಾಗಿ ಡೊನಾಲ್ಡ್ ಟ್ರಂಪ್ ಅವರು ತೀವ್ರ ಆಕ್ರೋಶವನ್ನ ಹೊರ ಹಾಕಿದ್ದಾರೆಂದು ವರದಿಯಾಗಿದೆ. ಈ ಮೂಲಕ, ಮುಕ್ಕಾಲು ಶತಮಾನಗಳ ಕಾಲ ಗಟ್ಟಿಯಾದ ಸ್ನೇಹ ಹೊಂದಿದ್ದ ಅಮೆರಿಕ & ಇಸ್ರೇಲ್ ನಡುವೆ ಇರಾನ್ ಯುದ್ಧ ಹೊಸ ಬಿರುಗಾಳಿ ಸೃಷ್ಟಿಸಿರುವ ಸುಳಿವು ಇದೀಗ ಸಿಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular