ಪ್ಲೂಟೋ ಮೇಲ್ಮೈನಲ್ಲಿರುವ ಹೃದಯಾಕೃತಿಯ ಹಿಮಗಲ್ಲಿನ ಚಿತ್ರ ಬಿಡುಗಡೆ ಮಾಡಿದ ನಾಸಾ

ನಮ್ಮ ಸೌರ ಮಂಡಲದಲ್ಲಿ ಜರುಗುವ ವಿಶಿಷ್ಟ ಘಟನಾವಳಿಗಳ ಚಿತ್ರಗಳನ್ನು ನಿಯಮಿತವಾಗಿ ಶೇರ್‌ ಮಾಡುವ ನಾಸಾ ಖಗೋಳ ಪ್ರೇಮಿಗಳಿಗೆ ಸದಾ ಒಂದಿಲ್ಲೊಂದು ಆಸಕ್ತಿಕರ ವಿಷಯಗಳನ್ನು ತಿಳಿಸುತ್ತಿರುತ್ತದೆ.

ನಾಸಾದ ನ್ಯೂ ಹಾರಿಜ಼ಾನ್ಸ್ ಬಾಹ್ಯಾಕಾಶನೌಕೆ ಪ್ಲೂಟೋದ ಮೇಲ್ಮೈನಲ್ಲಿ ಕಂಡು ಬಂದಿರುವ ಹಿಮಗಲ್ಲನ್ನು ಸೆರೆ ಹಿಡಿದಿದೆ. ಹೃದಯಾಕೃತಿಯಲ್ಲಿರುವ ಈ ಹಿಮಗಲ್ಲಿನ ಚಿತ್ರಗಳನ್ನು ನಾಸಾ ತನ್ನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದೆ.

ಪ್ಲೂಟೂದಲ್ಲಿ ಮೀಥೇನ್ ಹಾಗೂ ನೈಟ್ರೋಜನ್ ಐಸ್‌ನಿಂದ ಸೃಷ್ಟಿಯಾಗಿರುವ ಬೆಟ್ಟಗಳು, ಕಣಿವೆಗಳು, ಕುಳಿಗಳು ಹಾಗೂ ಮೈದಾನಗಳಿರುವ ಮಂಜಿನ ಜಗತ್ತಾದ ಪ್ಲೂಟೋ ಸೂರ್ಯನಿಂದ 590 ಕೋಟಿ ಕಿಮೀ ದೂರದಲ್ಲಿದೆ ಎಂದು ನಾಸಾ ವಿವರಿಸಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read