ಪ್ರಾಣಾಪಾಯದಿಂದ ಪವಾಡ ಸದೃಶವಾಗಿ ಪಾರಾದ ಮಹಿಳೆ….! ವಿಡಿಯೋ ವೈರಲ್

 ಕೆಲಸ ಮಾಡುವ ಸ್ಥಳದಲ್ಲಿ ಕೆಲವೊಮ್ಮೆ ನಿರೀಕ್ಷೆಗೂ ಮೀರಿದ ಅನಾಹುತ ಘಟನೆಗಳು ಸಂಭವಿಸುತ್ತವೆ. ಅದರಲ್ಲೂ ಯಂತ್ರಗಳೊಂದಿಗೆ ಕೆಲಸ ಮಾಡುವಾಗ ಎಚ್ಚರಿಕೆ ಅತ್ಯಗತ್ಯ. ಸ್ವಲ್ಪ ಯಾಮಾರಿದ್ರೂ ಪ್ರಾಣವೇ ಹೋಗಿಬಿಡುತ್ತೆ. ಅದೃಷ್ಟವಶಾತ್ ಯಂತ್ರಕ್ಕೆ ಸಿಲುಕಿದ ಮಹಿಳೆಯೊಬ್ಬರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಕೆಲಸದ ಜಾಗದಲ್ಲಿ ಮಹಿಳೆಯೊಬ್ಬರು ರೋಲಿಂಗ್ ಮಷಿನ್ ನೊಳಕ್ಕೆ ಸಿಲುಕಿ ಹಾಕಿಕೊಂಡು ಪಾರಾಗಿದ್ದಾರೆ. ಬಟ್ಟೆ ಉದ್ಯಮ ಅಥವಾ ಶೀಟ್ ಮೆಟಲ್ ಉತ್ಪಾದಿಸುವಾಗ ಬಳಸುವ ದೊಡ್ಡ ರೋಲಿಂಗ್ ಮಷಿನ್ ನೊಳಗೆ ಮಹಿಳೆಯೊಬ್ಬರು ಸಿಲುಕಿಕೊಳ್ಳುತ್ತಾರೆ. ಮಷಿನ್ ಹಲವಾರು ಬಾರಿ ಸುತ್ತಿದರೂ ಮಹಿಳೆಗೆ ಹೆಚ್ಚಿನ ಗಾಯಗಳಾಗದೇ ಪಾರಾಗಿದ್ದಾರೆ. ಅವರಿಗೆ ಹೆಚ್ಚು ಅಪಾಯ ಅನುಭವಿಸುವ ಮೊದಲು ಎಂಜಿನ್ ಸ್ಥಗಿತಗೊಂಡಿದ್ದರಿಂದ ಪ್ರಾಣ ಉಳಿದಿದೆ.

ಎದೆ ನಡುಗಿಸುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಬೆಚ್ಚಿಬೀಳಿಸಿದೆ. ಘಟನೆಯು ಚೀನಾದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದ್ದರೂ ಅದರ ಬಗ್ಗೆ ಸ್ಪಷ್ಟನೆ ಇಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read